ಚಿನ್ನಾಭರಣ ದೋಚಿದ ಕಳ್ಳ ಬಾಬಾ

Robbery baba

23-11-2017

ಬೆಂಗಳೂರು: ಸೂರ್ಯನಗರದ ಕಿತ್ತಗಾನಹಳ್ಳಿಯಲ್ಲಿ ಮೂರ್ಛೆ ರೋಗ ಇನ್ನಿತರ ಖಾಯಿಲೆಗಳಿಗೆ ಔಷಧಿ ನೀಡುವುದಾಗಿ ಮಾರುವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಕಿತ್ತಗಾನಹಳ್ಳಿ ಲಕ್ಷ್ಮಿದೇವಿ ಕೃಷ್ಣಮೂರ್ತಿರವರ ಮನೆಗೆ ನಿನ್ನೆ ಮುಂಜಾನೆ ಇಬ್ಬರು ಮಹಿಳೆಯರು ಬಂದು ಮೂರ್ಛೆ ಕಾಯಿಲೆಗಳಿಗೆ ಔಷಧಿ ನೀಡುವುದಾಗಿ ಹೇಳಿ ಹೊರಟ ನಂತರ, ಇನ್ನೋರ್ವ ಮಾರು ವೇಷದ ಬಾಬಾ ಯಥಾವತ್ತಾಗಿ ಮೂರ್ಛೆ ಕಾಯಿಲೆಗೆ ಔಷಧಿ ಮತ್ತು ಮಾಟ ಮಂತ್ರಗಳಿಗೆ ವಿಶೇಷವಾದ ಪೂಜೆ ಮಾಡುವುದಾಗಿ ಮನೆಯೊಳಗೆ ಪ್ರವೇಶಿಸಿದ್ದಾನೆ.

ಪೂಜೆ ಮಾಡುತ್ತಾ ರಾಸಾಯನಿಕ ವಸ್ತು ಬಳಸಿ ಮನೆಯಲ್ಲಿದ್ದ ಸದಸ್ಯರ ಪ್ರಜ್ಞೆ ತಪ್ಪಿಸಿದ್ದಾನೆ. ನಮ್ಮೆಲ್ಲರನ್ನು ಪ್ರಜ್ಞೆ ಇಲ್ಲದಂತೆ ಮಾಡಿ ಸುಮಾರು ಐದು ಲಕ್ಷ ಮೌಲ್ಯದ ಆಭರಣಗಳು ಮತ್ತು 15 ಸಾವಿರ ರೂಪಾಯಿ ಹಣವನ್ನು ದೋಚಿ ಕಳ್ಳ ಬಾಬ ಪರಾರಿಯಾದ ಎಂದು ಲಕ್ಷ್ಮಿದೇವಿ ಸಂಬಂಧಿ ಸೂರ್ಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ