ಸದನದಲ್ಲಿ ಬಿಜೆಪಿ-ಜೆಡಿಎಸ್ ವಾಕ್ಸಮರ23-11-2017 3097

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಮಹದಾಯಿ, ಕಳಸಾ-ಬಂಡೂರಿ ನಾಲಾ, ಪ್ರಾದೇಶಿಕ ಅಸಮತೋಲನ, ಡಾ.ಡಿ.ಎಂ.ನಂಜುಂಡಪ್ಪ ವರದಿಯ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು  ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತ ವಿಧಾನಸಭೆಯಲ್ಲಿಂದು ಆರೋಪಿಸಿದರು.

ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತಂತೆ 1964ಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಅವಧಿಯಲ್ಲಿ ಪ್ರಕಟಿಸಿದ ಬರ ಪೀಡಿತ ಪ್ರದೇಶಗಳಿಗೆ ಶಾಶ್ವತ ಯೋಜನೆಯ ಮೊತ್ತ 40 ಕೋಟಿ ರೂ ಆಗಿತ್ತು. ಕಳೆದ 53 ವರ್ಷಗಳಾದರು ಅದೇ ಯೋಜನೆಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಇನ್ನೂ ಹೆಚ್ಚುವರಿಯಾಗಿ 51 ಸಾವಿರ ಕೋಟಿ ರೂಪಾಯಿ ಅಗತ್ಯ ಕುರಿತು ಮಾತನಾಡುವ ಸ್ಥಿತಿ ಬಂದಿರುವ ದುರ್ದೈವ ಎಂದರು.

ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯುಕೆಪಿ ಯೋಜನೆಗೆ ಹೆಚ್ಚಿನ ಚಾಲನೆ ದೊರೆತಿದ್ದಲ್ಲದೆ, ಅವರು, ಪ್ರಧಾನಿಯಾದ ಬಳಿಕ ಬೃಹತ್ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ನೆರವು ನೀಡಿದ್ದರು ಎಂದು ಹೇಳಿದರು. ಕಳಸಾ-ಬಂಡೂರಿ ನಾಲಾ ವಿಚಾರದಲ್ಲಿ ಮಾತುಕತೆ ಮೂಲಕ ಒಮ್ಮತದ ತೀರ್ಮಾನಕ್ಕೆ ಬರುವಂತೆ ಮಹದಾಯಿ ನ್ಯಾಯಾಧೀಕರಣ ಸಲಹೆ ಮಾಡಿದ್ದರೂ ಇದುವರೆಗೂ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಈ ವಿಷಯ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು. ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಸ್ತು ಸ್ಥಿತಿ ಕುರಿತು ಸದನಕ್ಕೆ ಮಾಹಿತಿ ನೀಡಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Exactly this information is true.... Respected Datta sir u r great simple leader but high thinking leader ever seen.
  • Srinivas
  • Private sector
Priligy Donuncoork [url=https://cialisse.com/]Cialis[/url] SminyDum Cialis On Line Sales daycle Cialis Urineedido Find Doryx Express Delivery
  • cialis for sale online
  • Accounting, finance