ಪೊಲೀಸ್ ಇಲಾಖೆ: ‘19 ಸಾವಿರ ಹುದ್ದೆ ಖಾಲಿ’

Police Department:

23-11-2017

ಬೆಳಗಾವಿ: ರಾಜ್ಯ ಪೊಲೀಸ್ ಇಲಾಖೆಯ ಎ, ಬಿ, ಸಿ, ಡಿ ವೃಂದಗಳಲ್ಲಿ  ಒಟ್ಟು 19,353 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಕಾಂತರಾಜು ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಪೊಲೀಸ್ ಇಲಾಖೆಗೆ ಗ್ರೂಪ್-ಎ ದರ್ಜೆಯಲ್ಲಿ 974 ಹುದ್ದೆಗಳು ಮಂಜೂರಾಗಿವೆ, ಅದರಲ್ಲಿ 727 ಮಂದಿ ಕೆಲಸ ಮಾಡುತ್ತಿದ್ದು, 247 ಹುದ್ದೆಗಳು ಖಾಲಿ ಇವೆ. ಗ್ರೂಪ್ ಬಿ ಶ್ರೇಣಿಯಲ್ಲಿ  1,739 ಹುದ್ದೆಗಳು ಮಂಜೂರಾಗಿದ್ದು, 1,503  ಮಂದಿ ಕೆಲಸ ಮಾಡುತ್ತಿದ್ದಾರೆ. 236 ಹುದ್ದೆಗಳು ಖಾಲಿ ಇವೆ. ಲಿಪಿತ ವರ್ಗದ ಸಿ ಮತ್ತು ಡಿ ದರ್ಜೆ ಪೈಕಿ ಗ್ರೂಪ್ ಸಿ ನಲ್ಲಿ 2,597 ಹುದ್ದೆಗಳು ಮಂಜೂರಾಗಿದ್ದು, 2119ಮಂದಿ ಕೆಲಸ ಮಾಡುತ್ತಿದ್ದಾರೆ. 478 ಹುದ್ದೆಗಳು ಖಾಲಿ ಇವೆ. ಅದೇ ರೀತಿ ಒಟ್ಟು 59,587 ಕಾನ್‍ ಸ್ಟೆಬಲ್ ಹುದ್ದೆಗಳು ಮಂಜೂರಾಗಿದ್ದು, 41,561 ಮಂದಿ ಕೆಲಸ ಮಾಡುತ್ತಿದ್ದಾರೆ. 18,026 ಹುದ್ದೆಗಳು ಖಾಲಿ ಇವೆ. ಒಟ್ಟು ಈ ಎಲ್ಲಾ ವರ್ಗದಲ್ಲಿ 19,353 ಹುದ್ದೆಗಳು ಖಾಲಿ ಉಳಿದಿವೆ ಎಂದು ಹೇಳಿದರು.

2012-13 ರಿಂದ 2016-17ನೇ ಸಾಲಿನವರೆಗೂ 756 ಸಿವಿಲ್ ಪಿಎಸ್‍ಐ, 213 ಸಿಎಆರ್, ಡಿಎಆರ್, ಆರ್‍ಎಸ್‍ಐ, 84 ವೈರ್‍ಲೆಸ್ ಪಿಎಸ್‍ಐ, 24 ಎಫ್‍ಪಿಬಿ ಪಿಎಸ್‍ಐ, 41 ಗುಪ್ತವಾರ್ತೆ ಪಿಎಸ್‍ಐ, 12 ಡಿಟೆಕ್ಟೀವ್ ಪಿಎಸ್‍ಐ, 261 ವಿಶೇಷ ಕೆಎಸ್‍ಆರ್‍ಪಿ ಆರ್‍ಎಸ್‍ಐ, 157 ಕೆಎಸ್‍ಐಎಸ್‍ಎಫ್ ಎಸ್‍ಐ, 34 ಐಆರ್‍ಬಿ ಎಸ್‍ಐ ಸೇರಿದಂತೆ 1582 ಪಿಎಸ್‍ಐ ವೃಂದದ ಹುದ್ದೆಗಳಿಗೆ 26,188 ಕಾನ್‍ಸ್ಟೆಬಲ್ ವೃಂದದ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ ಎಂದು ಹೇಳಿದರು.

ಇನ್ನು ಹೆದ್ದಾರಿ ಪಕ್ಕದಲ್ಲಿ ಫುಟ್‍ಪಾತ್ ವ್ಯಾಪಾರವನ್ನು ತಡೆಗಟ್ಟುವುದು ಪೊಲೀಸರ ಕರ್ತವ್ಯ ಅಲ್ಲ. ಸ್ಥಳೀಯ ಸಂಸ್ಥೆಗಳು ಅದರ ಹೊಣೆಗಾರಿಕೆ ಹೊರಬೇಕು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು. ಆದರೆ ಪೊಲೀಸ್ ಇಲಾಖೆಯವರು ಫುಟ್‍ಪಾತ್ ವ್ಯಾಪಾರಿಗಳಿಂದ ತಿಂಗಳ ಮಾಮೂಲಿ ಪಡೆದು ರಿಂಗ್ ರಸ್ತೆಗಳಲ್ಲಿ ಅಂಗಡಿ ನಡೆಸಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಕಾಂತರಾಜು ಆರೋಪಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ