ಆತಂಕ ಸೃಷ್ಟಿಸಿದ ಶಾಲಾ ಕಟ್ಟಡ

School building and anxiety

23-11-2017

ಬೆಂಗಳೂರು: ರಾಜ ಕಾಲುವೆ ಕಾಮಗಾರಿ ನಡೆಯುತ್ತಿರುವುದರಿಂದ ಪಕ್ಕದಲ್ಲಿದ್ದ ಬಿಬಿಎಂಪಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಅಂತಸ್ತಿನ ಕಟ್ಟಡದ ಕೆಳಭಾಗದ ಮಣ್ಣು ಕುಸಿದು ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ತೀವ್ರ ಆತಂಕ ಮೂಡಿಸಿರುವ ಘಟನೆ ಆರ್.ಟಿ ನಗರದ ಮನ್ನಾರಾಯನಪಾಳ್ಯದಲ್ಲಿ ನಡೆದಿದೆ.

ಮನ್ನಾರಾಯನಪಾಳ್ಯದ ದೊಡ್ಡಮ್ಮ ದೇವಸ್ಥಾನ ಬಳಿಯ ಸರಕಾರಿ ಶಾಲೆಯ ಹಿಂಭಾಗ ಕೆಲದಿನಗಳಿಂದ ರಾಜಕಾಲುವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಕಳೆದ ಎರಡು ದಿನದ ಹಿಂದೆ ಶಾಲೆಯ ಹಿಂಭಾಗದಲ್ಲಿ ಹೂಳೆತ್ತುವ ಕಾಮಗಾರಿ ಶುರುವಾದ ಹಿನ್ನೆಲೆಯಲ್ಲಿ ಶಾಲಾ ಕಟ್ಟಡ ಕಡೆ ಮಣ್ಣು ಕುಸಿಯಲಾಂರಭಿಸಿದೆ.

ಶಾಲಾ ಕಟ್ಟಡದ ಅಡಿಪಾಯದಲ್ಲಿದ್ದ ಬೀಮ್‍ನ್ನು ತೆರವುಗೊಳಿಸಿ ಹೂಳೆತ್ತುವ ಕಾಮಗಾರಿ ನಡೆಸುತ್ತಿದ್ದ ಪರಿಣಾಮ ಮಣ್ಣು ಕುಸಿದಿದೆ. ಇದರಿಂದ ಆತಂಕಗೊಂಡ ಶಾಲಾ ಪ್ರಾಂಶುಪಾಲರು ಕೂಡಲೇ ಮಕ್ಕಳನ್ನು ಶಾಲೆಯಿಂದ ಹೊರ ಕಳುಹಿಸಿದ್ದಾರೆ. ಶಾಲೆಯಲ್ಲಿ ಸುಮಾರು 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಘಟನೆ ಹಿನ್ನೆಲೆಯಲ್ಲಿ ಕೆಲಹೊತ್ತು ಮಕ್ಕಳನ್ನು ಶಾಲೆಯ ಹೊರಗೆ ಕುಳಿಹಿಸಿ ಕಾಮಗಾರಿ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ