ಚಾಲಕ-ಕಂಡಕ್ಟರ್ ನಿಂದ ಮಹಿಳೆಗೆ ಕಿರುಕುಳ

Bus conductor harassment on women

23-11-2017

ಬೆಂಗಳೂರು: ಶಾಂತಿನಗರದ ಬಸ್‍ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ತಮಿಳುನಾಡು ಬಸ್ ಚಾಲಕ ಮತ್ತು ಕಂಡಕ್ಟರ್ ಅನುಚಿತವಾಗಿ ವರ್ತಿಸಿರುವ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ. ಅಲಹಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ಡಾಕ್ಟರ್ ಪಟೇಲ್ ಎನ್ನುವ ಎಂಬ ಮಹಿಳೆ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ನಗರದ ಶಾಂತಿನಗರ ಬಸ್ ನಿಲ್ದಾಣಕ್ಕೆ ಬಂದಿದ್ದರು. ತಮಿಳುನಾಡಿನ ವೆಲ್ಲೂರಿಗೆ ಟಿಕೆಟ್ ಕೊಟ್ಟ ಕಂಡಕ್ಟರ್ ಹತ್ತು ನಿಮಿಷದಲ್ಲಿ ಬಸ್ ಹೊರಡುತ್ತೆ ಎಂದು ಹೇಳಿದ್ದರು.

ಆದರೆ ಎರಡು ಗಂಟೆಯಾದರೂ ಬಸ್ ಹೊರಡದಿರುವುದಕ್ಕೆ ಬೇಸರಗೊಂಡು ಡಾಕ್ಟರ್ ಪಟೇಲ್ ಪ್ರಶ್ನೆ ಮಾಡಿದಾಗ ಡ್ರೈವರ್ ಮತ್ತು ಕಂಡಕ್ಟರ್ ಇನ್ನೂ ಹತ್ತು ಟಿಕೆಟ್ ಬಾಕಿ ಉಳಿದಿವೆ. ಅದನ್ನು ನೀವೇ ಖರೀದಿಸಿ ಆಗ ಹೋಗೋಣ ಎಂದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಡಾಕ್ಟರ್ ಪಟೇಲ್ ಆರೋಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ