ಡಾಕ್ಟರ್ ವೇಷದಲ್ಲಿ ಮಾನಸಿಕ ಅಸ್ವಸ್ಥೆ

Mental illness women as doctor

23-11-2017

ಕಲಬುರಗಿ: ಕೋರ್ಟ್ ಗೆ ಹೋದರೆ ಲಾಯರ್ ಕೋಟು ಹಾಕುವ, ಆಸ್ಪತ್ರೆಗೆ ಬಂದರೆ ವೈದ್ಯರ ಡ್ರೆಸ್ ಹಾಕುವ ಮಾನಸಿಕ ಅಸ್ವಸ್ಥ ಯುವತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯರ ಡ್ರೆಸ್ ಹಾಕಿಕೊಂಡು ಆಸ್ಪತ್ರೆಯಲ್ಲಿ ಒಡಾಡುತ್ತಿದ್ದಾಗ, ಅನುಮಾನಗೊಂಡು ವಿಚಾರಣೆ ನಡೆಸಿದ್ದು ಆಕೆ ವೈದ್ಯೆ ಅಲ್ಲ ಎಂದು ತಿಳಿದು ಬಂದಿದೆ. ಘಟನೆಯು ಕಲಬುರಗಿಯಲ್ಲಿ ನಡೆದಿದೆ. ಜಿಲ್ಲೆಯ ಬಸವೇಶ್ವರ ಆಸ್ಪತ್ರೆಯಲ್ಲಿ ಅಶ್ವಿನಿ‌ ಎಂಬ ಯುವತಿ, ವೈದ್ಯ ವೇಷದಲ್ಲಿರುವುದನ್ನು ಎಂ.ಬಿ.ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ವಿಚಾರಣೆ ವೇಳೆ ಯುವತಿ ಮಾನಸಿಕ ಅಸ್ವಸ್ಥೆ ಎಂದು ತಿಳಿದು ಬಂದಿದ್ದು, ಪೊಲೀಸರು ಸ್ಪಷ್ಟಪಡಿದ್ದಾರೆ. ಮಾನಸಿಕ ಅಸ್ವಸ್ಥ ಯುವತಿಯನ್ನು ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Kalaburagi Hospital ಮಾನಸಿಕ ಅಸ್ವಸ್ಥ ಬಸವೇಶ್ವರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ