ಮೈಸೂರಲ್ಲಿ ‘ಪದ್ಮಾವತಿಗೆ’ ಪ್ರತಿಭಟನೆ ಬಿಸಿ

Protest against Padmavati movie

23-11-2017

ಮೈಸೂರು: ವಿವಾದಿತ ‘ಪದ್ಮಾವತಿ’ ಚಿತ್ರವನ್ನು ಬಿಡುಗಡೆ ಮಾಡದಂತೆ ಮೈಸೂರಿನಲ್ಲಿ ಮಹಾರಾಣಾ ಪ್ರತಾಪ್ ಸಿಂಗ್ ಜೀ ರಾಜಪೂತ್ ಕ್ಷತ್ರೀಯ ಸಮಾಜ್ ಬೃಹತ್ ಜಾಥಾ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.  

ಇಂದು ನಗರದ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಮುಂಬಾಗದಲ್ಲಿ ಜಮಾವಣೆಗೊಂಡ ಮಹಾರಾಣಾ ಪ್ರತಾಪ್ ಸಿಂಗ್ ಜೀ ರಾಜಪೂತ್ ಕ್ಷತ್ರೀಯ ಸಮಾಜದ ನೂರಾರು ಕಾರ್ಯಕರ್ತರು ದೇವರಾಜು ಅರಸು ರಸ್ತೆ ಮೂಲಕ ಬೃಹತ್ ಜಾಥಾ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಾತೆ ರಾಣಿ ಪದ್ಮಾವತಿಯನ್ನ ಅವಹೇಳಕಾರಿಯಾಗಿ ಪದ್ಮಾವತಿ ಚಿತ್ರದಲ್ಲಿ ಚಿತ್ರಿಸಿದ್ದಾರೆ. ರಾಜಪೂತ್ ಜನಾಂಗದ ಪ್ರತೀಕವಾಗಿರುವ, ಆತ್ಮಾಭಿಮಾನದ ಸಂಕೇತಾದ ಅಪೂರ್ವ ಸೌಂದರ್ಯವತಿ ಶ್ರೀಮತಿ ರಾಣಿ ಪದ್ಮಾವತಿ, ರಾಜಾಸ್ಥಾನದ ಚಿತ್ತೋರಘಡದ ರಾಜ ರತನ್ ಸಿಂಗ್ ರವರ ಧರ್ಮಪತ್ನಿ. ಶತ್ರುಗಳನ್ನು ಧೈರ್ಯವಾಗಿ ಎದುರಿಸಿ ತನ್ನ ಪತಿ ತೀರಿಕೊಂಡಾಗ ಸತಿಯಾದ ಮಹಾ ಸಾಧ್ವಿ ಪದ್ಮಾವತಿ.

ಸಂಜಯ್ ಲೀಲಾ ಬಲ್ಸಾಲಿ ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನ ತಿರುಚಿ ರಾಜಪುತ್ರ ಜನಾಂಗಕ್ಕೆ ಅವಮಾನವಾಗುವ ರೀತಿಯಲ್ಲಿ ಚಿತ್ರೀಕರಿಸಿದ್ದಾರೆ. ಆದ್ದರಿಂದ ಚಿತ್ರದಲ್ಲಿರುವ ಅನುಚಿತ ಭಾಗವನ್ನು ತೆಗೆದು ಹಾಕಬೇಕು. ಇಲ್ಲದಿದ್ದರೆ ನಗರದಲ್ಲಿ ಪದ್ಮಾವತಿ ಚಿತ್ರವನ್ನು ತೆರೆಗೆ ಬರಲು ಬಿಡಿವುದಿಲ್ಲ ಎಂದು ಪ್ರತಿಭಟನಾಕರಾರು ಎಚ್ಚರಿಕೆ ನೀಡಿದರು. ಇದೇ ಸಂಧರ್ಭದಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ, ನೋಟಿಗಾಗಿ ತನ್ನ ಮೈ ಮಾರಿಕೊಳ್ಳುತ್ತಿರುವ ದೀಪಿಕಾ ಪಡುಕೋಣೆಗೆ ಧಿಕ್ಕಾರ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ