ಕ್ರಿಕೆಟ್ ಬೆಟ್ಟಿಂಗ್ ಅಡ್ಡಾ ಮೇಲೆ ಪೊಲೀಸರ ದಾಳಿ

07-04-2017
ಹುಬ್ಬಳ್ಳಿ- ಕ್ರಿಕೆಟ್ ಬೆಟ್ಟಿಂಗ್ ಅಡ್ಡಾ ಮೇಲೆ ಪೊಲೀಸರ ದಾಳಿ. ಲೈನ್ ಮಷೀನ್ ಇಟ್ಟುಕೊಂಡು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ದಂಧೆಕೋರರು. ಹುಬ್ಬಳ್ಳಿ ಉಪನಗರ ಪೊಲೀಸರ ಭಜ೯ರಿ ಭೇಟೆ. ತಡ ರಾತ್ರಿ ದಾಳಿ ನಡೆಸಿ ಬಂಧಿಸಿದ ಪೊಲೀಸರು.
ಇಬ್ಬರು ಕುಖ್ಯಾತ ಕ್ರಿಕೆಟ್ ಬುಕ್ಕಿಗಳ ಬಂಧನ. ಗಜಾನನ ಕಠಾರೇ ಹಾಗೂ ರಾಘವೇಂದ್ರ ಹನುಮಸಾಗರ ಬಂಧನ. ಹುಬ್ಬಳ್ಳಿಯ ಕೇಶ್ವಾಪೂರದ ಮನೆಯಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಬುಕ್ಕಿಗಳು. ಗಜಾನನ ಕಠಾರೇ ಕುಖ್ಯಾತ ಕ್ರಿಕೆಟ್ ಬುಕ್ಕಿ ವಿರು ಕಠಾರೇ ಸಹೋದರ ಎನ್ನಲಾಗಿದೆ.
ಈ ಬಂಧಿತರಿಂದ ಒಂದು ಲೈನ್ ಮಷಿನ್ ಹಾಗೂ ಒಂದು ಲ್ಯಾಪ್ ಟಾಪ್ ವಶ ಪಡಿಸಿಕೊಳ್ಳಲಾಗಿದ್ದು ಈ ಬಗ್ಗೆ ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಒಂದು ಕಮೆಂಟನ್ನು ಹಾಕಿ