ಗ್ಯಾಸ್ ಲೀಕ್: ಕಾರು ಸ್ಟೋಟ

Gas Leak Car blast !

23-11-2017

ಹಾಸನ: ಆಮ್ನಿ ಕಾರಿನಲ್ಲಿ ಗ್ಯಾಸ್ ಲೀಕಾದ ಹಿನ್ನೆಲೆ, ಕಾರು ಸ್ಪೋಟಗೊಂಡಿದ್ದು, ಕಾರು ಸಂಪೂರ್ಣ ಸುಟ್ಟು ಕರಕಲಾಗಿರು ಘಟನೆಯು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಗಾಂಧಿ ವೃತ್ತದಲ್ಲಿ ಸ್ಪೋಟಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಜಯರಾಮ್ ಎಂಬುವರಿಗೆ ಸೇರಿರುವುದಾಗಿ ತಿಳಿದು ಬಂದಿದೆ. ಮನೆಯಿಂದ ಕೂಗಳತೆ ದೂರದಲ್ಲಿ ಕಾರು ನಿಲ್ಲಿಸಿದ್ದು, ಗ್ಯಾಸ್ ಲೀಕಾಗುತ್ತಿತ್ತು, ಇನ್ನು ಈ ವೇಳೆ ಕಾರನ್ನು ಆನ್ ಮಾಡಿದ ಜಯರಾಂ ಮನೆಯೊಳಕ್ಕೆ ಹೋಗಿದ್ದಾರೆ, ಇದಾದ ಕೆಲವೇ ಕ್ಷಣಗಳಲ್ಲಿ ಕಾರು ಸ್ಟೋಟಗೊಂಡಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ  ಬೆಂಕಿ ನಂದಿಸಿದೆ. ಚನ್ನರಾಯಪಟ್ಟಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Car Blast Hassan ಚನ್ನರಾಯಪಟ್ಟಣ ಸ್ಟೋಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ