ಸಂಬಳಕ್ಕಾಗಿ ಕಾರ್ಮಿಕರ ಆಹೋರಾತ್ರಿ ಧರಣಿ

Workers protest against company

23-11-2017

ಬೆಂಗಳೂರು: ಕಂಪನಿಯಲ್ಲಿ ಸರಿಯಾಗಿ ಸಂಬಳ ನೀಡುತ್ತಿಲ್ಲವೆಂದು ಕಾರ್ಮಿಕರು ಅಹೋರಾತ್ರಿ ಧರಣಿ ಕೂತಿದ್ದಾರೆ. ಕೆಲಸಗಾರರಿಗೆ ಯಾವುದೆ ಮಾಹಿತಿ ನೀಡದೆ, ಗಾರ್ಮೆಂಟ್ ಕಂಪನಿಯ ಹೆಸರು ಬದಲಿಸಿ ಹೊಸ ಕಂಪನಿಯಲ್ಲಿ ಸಂಬಳ ಸರಿ ನೀಡುತ್ತಿಲ್ಲ ಎಂದು ಬೆಂಗಳೂರಿನ ಗೊರಗೊಂಟೆಪಾಳ್ಯದಲ್ಲಿರೋ ಬಾಂಬೆ ರೈಗಾರ್ಮೆಂಟ್ ಎದುರು ಮಹಿಳೆಯರು ಆಹೋರಾತ್ರಿ ಪ್ರತಿಭಟನೆ ನೆಡೆಸುತಿದ್ದಾರೆ. ಇನ್ನೂ ಕಳೆದ 3 ದಿನಗಳಿಂದ 400 ಕ್ಕೂ ಮಹಿಳೆ ಕಾರ್ಮಿಕರು ಆಹೋರಾತ್ರಿ ಪ್ರತಿಭಟನೆ ಮಾಡುತಿದ್ದರೆ. ಕಳೆದ 5 ವರ್ಷಗಳಿಂದ ಅಪೇಕ್ಸ್ ಎಂಬ ಗಾರ್ಮೆಂಟ್ಸ್ ಕಂಪೆನಿಯಲ್ಲಿ 400 ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದರೆ ಅಪೇಕ್ಸ್ ಗಾರ್ಮೆಂಟ್ಸ್ ಕಂಪೆನಿಯ ಆಡಳಿತ ಮಂಡಳಿ ಕಾರ್ಮಿಕರಿಗೆ ಯಾವುದೆ ಮಾಹಿತಿ ನೀಡದೆ ಬಾಂಬೆ ರೈ ಎಂಬ ಕಂಪನಿಗೆ ಸೇಲ್ ಮಾಡಿದ್ದಾರೆ. ಆದರೆ ಬಾಂಬೆ ರೈ ಗಾರ್ಮೆಂಟ್ಸ್ ನ ಆಡಳಿತ ಮಂಡಳಿ ಕೆಸಲಗಾರರಿಗೆ ಅಪೇಕ್ಸ್ ಗಾರ್ಮೆಂಟ್ಸ್ ನಲ್ಲಿ ಕಟ್ ಮಾಡಿದ್ದ ಪಿಂಚಣಿಯನ್ನು ನೀಡಲು ಆಗೋದಿಲ್ಲ ಎಂದು ಹೇಳಿರುವುದಾಗಿ, ಕಾರ್ಮಿಕರು ಬಾಂಬೆ ರೈ ಗಾರ್ಮೆಂಟ್ಸ್ ವಿರುದ್ದ ಆರೋಪ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ 400 ಹೆಚ್ಚು ಕಾರ್ಮಿಕರು ಕಳೆದ ಮೂರು ದಿನಗಳಿಂದ ತಮ್ಮ ಮಕ್ಕಳ ಸಮೇತೆ ಬಾಂಬೆ ರೈ ಗಾರ್ಮೆಂಟ್ಸ್ ಮುಂಬಾಗದಲ್ಲಿ ಆಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Garments factory protest ಕಾರ್ಮಿಕರು ಅಹೋರಾತ್ರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ