ಧರ್ಮ ಸಂಸತ್ತು:‘ರಾಮ ಮಂದಿರದ ಬಗ್ಗೆ ಚರ್ಚೆ’

Religion parliament:

22-11-2017

ಉಡುಪಿ: ಇದೇ ತಿಂಗಳ 24ರಂದು ಉಡುಪಿಯಲ್ಲಿ ಧರ್ಮ ಸಂಸತ್ತು ನಡೆಯಲಿದ್ದು, ಈ ಕುರಿತಂತೆ ಕಾರ್ಯಕ್ರಮಗಳ ಬಗ್ಗೆ ವಿಹಿಂಪ ಪ್ರಾಂತ ಅಧ್ಯಕ್ಷ ಎಂ.ಬಿ ಪುರಾಣಿಕ್ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ್ದಾರೆ. ಎರಡು ಸಾವಿರ ಸಂತರು ಧರ್ಮ ಸಂಸತ್ತಿನಲ್ಲಿ ಪಾಲ್ಗೊಳ್ಳುತ್ತಾರೆ, ಪೇಜಾವರ ಶ್ರೀಗಳ ಸೂಕ್ತ ಸೂಚನೆಗಳ ಪ್ರಕಾರ ಧರ್ಮ ಸಂಸತ್ತು ನಡೆಯುತ್ತದೆ, ಕಾರ್ಯಕ್ರಮಕ್ಕೆ ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನವಿದೆ ಎಂದರು. ದೇಶದ ಉದ್ದಗಲದಿಂದ ಸಂತರು, ವಿಮಾನ, ರೈಲು- ರಸ್ತೆ ಮಾರ್ಗವಾಗಿ ಉಡುಪಿಗೆ ಬರಲಿದ್ದಾರೆ. ಮಠ-ಛತ್ರ-ದೇವಸ್ಥಾನ-ಸಭಾಂಗಣದಲ್ಲಿ ಸಂತರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ, ನ.24ರ ಬೆಳಿಗ್ಗೆ ಕೃಷ್ಣಮಠದಿಂದ ಸಂತರ ಮೆರವಣಿಗೆ ಆರಂಭವಾಗುತ್ತದೆ, ಋಷಿ ಮುನಿಗಳ ಪಾದ ಪೂಜೆ ನಡೆಸಿ ಮೆರವಣಿಗೆ ಆರಂಭವಾಗಲಿದ್ದು, 10 ಗಂಟೆಗೆ ಧರ್ಮಸಂಸತ್ತು ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು. ಸಂತರಿಗೆ ಉತ್ತರ ಭಾರತ-ದಕ್ಷಿಣ ಭಾರತ ಊಟೋಪಚಾರವಿದೆ, ಮೊದಲ ದಿನ ರಾಮ ಜನ್ಮಭೂಮಿ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು. ಇನ್ನು ಚರ್ಚೆಯಲ್ಲಿ ಸಂತರಿಗೆ ಮಾತ್ರ ಭಾಗಿಯಾಗಲು ಅವಕಾಶ ಎಂದು ಮಾಹಿತಿ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

udupi Krishna mutt ಧರ್ಮ ಸಂಸತ್ತು ಪೇಜಾವರ ಶ್ರೀ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ