ನಗರದಲ್ಲಿ ನೈಜೀರಿಯನ್‍ ಪ್ರಜೆ ಬಂಧನ

Cocaine: Nigerian man arrest

22-11-2017

ಬೆಂಗಳೂರು: ಕೆ.ಆರ್.ಪುರಂನ ರಿಲೆಯನ್ಸ್ ಫ್ರೆಶ್ ಮುಂಭಾಗ ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್‍ ಪ್ರಜೆಯೊಬ್ಬರನ್ನು ಬಂಧಿಸಿ, 30 ಸಾವಿರ ಮೌಲ್ಯದ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿ ನಗರದ ಖೆನ್ನೆತ್ ನವಭನೆ (24) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ 5 ಗ್ರಾಂ ಕೊಕೇನ್ ಮೊಬೈಲ್ ಸೇರಿ 30 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ವೀಸಾ ನಿಯಮ ಉಲ್ಲಂಘಿಸಿ ಕೊಕೇನ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ