'ಫ್ಲೆಕ್ಸ್ ಗಳಲ್ಲಿ ಸರಗಳ್ಳರ ಫೋಟೋ ಹಾಕಿ'

Chain Snachers Photos in Flex

22-11-2017

ಬೆಂಗಳೂರು: ಬೆಂಗಳೂರಿನಲ್ಲಿ ಸರಗಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆ, ಕ್ರಮಕ್ಕೆ ‌ಮುಂದಾಗಿರುವ ನಗರ ಪೊಲೀಸರು ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳರ ಫೋಟೋ ಹಾಕುವಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ಸೂಚಿಸಿದ್ದಾರೆ. ಫ್ಲೆಕ್ಸ್ ಗಳಲ್ಲಿ ಸರಗಳ್ಳರ ಫೋಟೋ ಹಾಕಲು ಆದೇಶಿಸಿದ್ದು, ಸರಗಳ್ಳತನ ಹೆಚ್ಚಾಗಿ ನಡೆಯುವ ಪ್ರದೇಶಗಳಲ್ಲಿ ಮತ್ತು ಪ್ರಮುಖವಾಗಿ ರಿಂಗ್ ರಸ್ತೆಗಳ ಸುತ್ತ ಮುತ್ತ ಸೂಚನಾ ಫಲಕ ಹಾಕಬೇಕೆಂದು ಹೇಳಿದ್ದಾರೆ.

ಬೆಳಗಿನ ಜಾವ ವಾಕಿಂಗ್ ಹೋಗುವ ಮಹಿಳೆಯರು ಹಾಗು ವೃದ್ಧೆಯರೇ ಸರಗಳ್ಳರ ಟಾರ್ಗೆಟ್ ಆಗಿದ್ದು, ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ ಮಾಡಿ ಪರಾರಿಯಾಗುವುದರಿಂದ, ಸೂಕ್ಷ್ಮ ಪ್ರದೇಶಗಳಲ್ಲಿ ಫಲಕಗಳನ್ನು ಹಾಕಲು ನಿರ್ದೇಶಿಸಿದ್ದಾರೆ. ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳರ ಪೊಟೋ ಪ್ರದರ್ಶಿಸಲು, ಎಲ್ಲಾ ಡಿಸಿಪಿಗಳಿಗೆ ನಗರ ಪೊಲೀಸ್ ಆಯಕ್ತ ಟಿ.ಸುನೀಲ್ ಕುಮಾರ್ ಅವರು ಆದೇಶಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ