ಮೂರು ಕಡೆ ಮೂವರು ಆತ್ಮಹತ್ಯೆ

Three people committed suicide

22-11-2017

ಬೆಂಗಳೂರು: ನಗರದ ಪ್ರತ್ಯೇಕ ಕಡೆಗಳಲ್ಲಿ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಳಿಮಾವುವಿನ ಗೊಟಿಗೆರೆಯ ಸಿಲ್ವರ್ ಸ್ಪ್ರಿಂಗ್ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ ಅಬ್ದುಲ್ ಖಾದರ್ (37)ಎನ್ನುವರು ಪತ್ನಿ ಮನೆ ಬಿಟ್ಟು ಹೋಗಿದ್ದರಿಂದ ನೊಂದು ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾರೆ.

ಆಸ್ತಮಾ ರೋಗದಿಂದ ಬಳಲುತ್ತಿದ್ದ ಖಾದರ್, ಅವರ ಪತ್ನಿ 2 ತಿಂಗಳ ಹಿಂದಷ್ಟೆ ಮನೆ ಬಿಟ್ಟು ಹೋಗಿದ್ದು, ಇದರಿಂದ ನೊಂದ ಅವರು, ಅಪಾರ್ಟ್‍ಮೆಂಟ್‍ನ ಮನೆಯ ಸೀಲಿಂಗ್ ಫ್ಯಾನಿಗೆ ರಾತ್ರಿ  11ರ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲಬಾಧೆ : ಯಲಹಂಕ ಉಪನಗರದ ಎಸ್ಕಾರ್ಟ್ ಲೇಔಟ್‍ನಲ್ಲಿ ಮನೆ ಕಟ್ಟಿ ಸಾಲ ಮಾಡಿಕೊಂಡಿದ್ದ ಯುವಕನೊಬ್ಬ ಸಾಲ ತೀರಿಸಲಾಗದೆ ನೊಂದು ಮಧ್ಯರಾತ್ರಿ ನೇಣಿಗೆ ಶರಣಾಗಿದ್ದಾನೆ. ಎಸ್ಕಾರ್ಟ್ ಲೇಔಟ್‍ನ ಸಂತೋಷ್ ನಗರದ ಸಂತೋಷ್ (34) ನೇಣಿಗೆ ಶರಣಾದವರು. ಸಾಲದ ಬಾಧೆಯಿಂದ ನೊಂದಿದ್ದ ಆತ, ಇತ್ತೀಚೆಗೆ ವಿಮಾ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿ ಕೆಲಸ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು, ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಉಪನಗರ ಪೊಲೀಸರು ತಿಳಿಸಿದ್ದಾರೆ.

ಯುವಕ ನೇಣಿಗೆ ಶರಣು: ಜೆಪಿ ನಗರದ 8ನೇ ಹಂತದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ವಾಸಿಸುತ್ತಿದ್ದ ಚೇತನ್ (24) ಎಂಬ ಯುವಕ ಜೀವನದಲ್ಲಿನ ಜುಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಲೂನ್ ನಡೆಸುತ್ತಿದ್ದ ಚೇತನ್, ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈತನಿಗೆ ವಿವಾಹವಾಗಿ ಒಂದು ಮಗುವಿದೆ. ಕೋಣನ ಕುಂಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Suicide Bengaluru ಆತ್ಮಹತ್ಯೆ ಸಾಲಬಾಧೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ