ಬೆಂಗಳೂರಿಗರಿಗೆ ಬೆಲೆಏರಿಕೆ ಬಿಸಿ !

Vegetables Price  hike

22-11-2017

ಬೆಂಗಳೂರು: ಬೆಂಗಳೂರಿಗರಿಗೆ ಮತ್ತೆ ತರಕಾರಿ ಬೆಲೆ ಏರಿಕೆ ಬಿಸಿ ತಟ್ಟಲಾರಂಭಿಸಿದ್ದು, ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಅಗತ್ಯ ತರಕಾರಿಗಳಾದ, ಈರುಳ್ಳಿ, ಟೊಮೆಟೋ, ಕ್ಯಾರೆಟ್ ದರದಲ್ಲಿ ಏರಿಕೆಯಾಗಿದೆ. ತೀವ್ರ ಮಳೆ ಹಿನ್ನೆಲೆ, ಅತಿವೃಷ್ಟಿಯಿಂದ ಇಳುವರಿ ಕಡಿಮೆಯಾಗಿದ್ದು, ತರಕಾರಿ ಬೆಲೆಗಳು ಗಗನಕ್ಕೇರಿವೆ. ಹಾಪ್ ಕಾಮ್ಸ್, ಮಾರುಕಟ್ಟೆಯಲ್ಲೂ ತರಕಾರಿ ದರದಲ್ಲಿ ಹೆಚ್ಚಳವಾಗಿದೆ. ಕೆ.ಜಿಗೆ 10 ರಿಂದ 30 ರೂಪಾಯಿ ಹೆಚ್ಚಳವಾಗಿದೆ. ಹಾಪ್ ಕಾಮ್ಸ್ ನಲ್ಲಿ ಟೊಮೆಟೋ ಬೆಲೆ 50 ರುಪಾಯಿದ್ದು, ಮಾರುಕಟ್ಟೆಯಲ್ಲಿ 65 ರುಪಾಯಿಗೆ ಏರಿಕೆಯಾಗಿದೆ. ಕ್ಯಾರೇಟ್ ಬೆಲೆ 100 ರುಪಾಯಿ, ಈರುಳ್ಳಿ ಬೆಲೆ ಕೆ.ಜಿ.ಗೆ 57 ರಿಂದ 60 ರುಪಾಯಿ, ನುಗ್ಗೆಕಾಯಿ ಬೆಲೆ 120 ರುಪಾಯಿ ಇದೆ.

ಉಳಿದಂತೆ ಬೀನ್ಸ್, ಮೂಲಂಗಿ, ದಪ್ಪಮೆಣಸಿನಕಾಯಿ, ಬದನೆಕಾಯಿ ಬೆಲೆಯಲ್ಲಿ ಇಳಿಕೆಯಾಗಿದೆ. ಅಗತ್ಯ ತರಕಾರಿಗಳ ಬೆಲೆ ಮಾತ್ರ ಏರಿಕೆಯಾಗಿದ್ದು, ಉಳಿದ ತರಕಾರಿಗಳ ಬೆಲೆ ಕಡಿಮೆ ಇದೆ. ಒಂದು ವಾರದಲ್ಲಿ ಬೆಲೆ ಇನ್ನೂ ಇಳಿಕೆಯಾಗಲಿದೆ ಎಂದು, ಹಾಪ್ ಕಾಮ್ಸ್ ಮ್ಯಾನೇಜರ್ ಗೋಪಾಲ ಗೌಡ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Vegetables Hike in price ಬೆಲೆಏರಿಕೆ ಮಾರುಕಟ್ಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ