ಎಟಿಎಂ ಮೆಷಿನ್ ಕದಿಯಲು ಯತ್ನ !

Attempt to steal ATM machine!

22-11-2017 224

ಮಂಡ್ಯ: ಎಟಿಎಂ ಮಷಿನ್ ನನ್ನೇ ಕದಿಯಲು ಯತ್ನಿಸಿರುವ ಘಟನೆಯು ಮಂಡ್ಯದಲ್ಲಿ ನಡೆದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಇಂಡಿಯನ್ ಬ್ಯಾಂಕ್ ಎಟಿಎಂ ದೋಚಲು ಕಳ್ಳರು ಯತ್ನಿಸಿದ್ದಾರೆ. ಎಟಿಎಂ ಮಾನಿಟರ್ ಬಿಚ್ಚಿದ್ದ ಕಳ್ಳರು, ಕ್ಯಾಶ್ ಬಾಕ್ಸ್ ಓಪನ್ ಆಗದ್ದರಿಂದ, ಇನ್ನು ಎಟಿಎಂ ಮಷಿನ್ ಅನ್ನು ಕೆಡವಲು ಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾದ್ದರಿಂದ ಹಾಗೆಯೇ ಬಿಟ್ಟು ಪರಾರಿಯಾಗಿದ್ದಾರೆ. ಕೆ.ಆರ್.ಎಸ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ