‘ಕ್ಷೇತ್ರ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ’

No compromise with constituency

21-11-2017 464

ಬೆಳಗಾವಿ: ಶಾಸಕ ಸತೀಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೋಳಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ, ಸಹೋದರನಿಗೆ ಟಾಂಗ್ ನೀಡಿದ ಶಾಸಕ ಸತೀಶ್ ಜಾರಕಿಹೊಳಿ, ಯಾರು ಬೇಕಾದರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿಂದು ಮಾತನಾಡಿದ ಅವರು, ಕೇವಲ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದರೆ ೫೦೦ ಹಾಗೂ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದರೆ ೧೦೦೦ ರೂಪಾಯಿ ಠೇವಣಿ ಕಟ್ಟಬೇಕಾಗುತ್ತದೆ. ಯಮಕನಮರಡಿ, ಗೋಕಾಕ, ಗ್ರಾಮೀಣ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ನನ್ನ ಕ್ಷೇತ್ರವನ್ನ ಬಿಟ್ಟು ಕೊಡಲು ಆತ ಯಾರು.? ಆರ್ಥಿಕ ತಜ್ಞನೋ, ಜಲ ತಜ್ಞನೋ, ಉದ್ಯಮಿನೋ ಎಂದು ಪ್ರಶ್ನಿಸಿದರು. ನಾನು ಯಾವುದೇ ಕಾರಣಕ್ಕೂ ಯಮಕನಮರಡಿ ಮತ ಕ್ಷೇತ್ರ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಸಹೋದರ ಎನ್ನುವ ವಿಚಾರ ಅದು ಬೇರೆ, ರಾಜಕಾರಣವೇ ಬೇರೆ ಎಂದು ಹೇಳಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಸಂಜಯ ಪಾಟೀಲ್ ಹೇಳಿಕೆ ವಿಚಾರವಾಗಿ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಜಯ್ ಪಾಟೀಲ್ ಹೀಗೆ ಕಲ್ಪನೆ ಇಲ್ಲದೆ ಮಾತನಾಡುವದು ಸರಿಯಲ್ಲ, ಇತಿಹಾಸ ಗೊತ್ತಿಲ್ಲದೆ ಈ ರೀತಿ ಹೇಳಿಕೆ ತಪ್ಪು, ಟಿಪ್ಪು ಒಬ್ಬ ಹೋರಾಟಗಾರ ಎಂದರು.

ಸಂಜಯ್ ಪಾಟೀಲ್ ನ ಸಮುದಾಯ ಹಿಂದೂ ಧರ್ಮದಿಂದ ದೂರಾಗಿ ಈಗ ಪ್ರತ್ಯೇಕ ಜೈನ ಧರ್ಮದಲ್ಲಿದ್ದಾರೆ, ಜೈನ ಧರ್ಮ ಪ್ರತ್ಯೇಕವಾಗಿ ದಶಕಗಳೇ ಕಳೆದಿವೆ, ಆದರೆ ಸಂಜಯ್ ಪಾಟೀಲ್ ಮಾತ್ರ ಇನ್ನೂ ಹಿಂದೂ ಧರ್ಮದಲ್ಲಿ ಯಾಕೇ ಇದ್ದರೆ ಇನ್ನೂ ತಿಳಿದಿಲ್ಲ ಎಂದು ಹೇಳಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ