ವಿಧಾನಸೌಧದಲ್ಲೇ ಹಿಂಗಾದರೆ ಹೇಗೆ..?

Sexual harassment in office

21-11-2017

ಬೆಂಗಳೂರು: ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವ ಹಿರಿಯ ಮಹಿಳಾ ಅಧಿಕಾರಿಯೊಬ್ಬರಿಗೆ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಮೂರ್ತಿ ಅವರು ತನಗೆ ನೀಡಿರುವ ಲೈಂಗಿಕ ಕಿರುಕುಳದ ಬಗ್ಗೆ ವಿಧಾನಸಭಾಧ್ಯಕ್ಷ ಕೋಳಿವಾಡ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ಥ ಮಹಿಳಾ ಅಧಿಕಾರಿ ಅಳಲು ತೋಡಿಕೊಂಡು ಕಾನೂನು ಸಚಿವ ಜಯಚಂದ್ರ ಅವರಿಗೆ ದೂರು ಸಲ್ಲಿಸಿದ್ದಾರೆ.

ಸಂತ್ರಸ್ಥ ಮಹಿಳಾ ಅಧಿಕಾರಿಯು ದೂರಿನಲ್ಲಿ, ನಾನು ಎಲ್ಲರಿಗಿಂತ ನಿನ್ನನ್ನೇ ಇಷ್ಟಪಡೋದು. ನಾವೆಲ್ಲ ಹೋಗಿ ಗೋವಾಕ್ಕೆ ಹೋಗಿ ಮರಳಿನಲ್ಲಿ ಉರುಳಾಡೋಣ. ನೀನು ತಲೆಗೆ ಹೇರ್ ಡೈ ಮಾಡಿಕೊಂಡು ಬಾ. ಸ್ಮಾರ್ಟ್ ಆಗಿ ಬಾ ನನಗೆ ಎನರ್ಜಿ ಬರಬೇಕು. ನಿನ್ನ ಮಗಳಿಗೆ ಮದುವೆ ಯಾಕೆ ಮಾಡುತ್ತೀಯಾ. ನಿನ್ನ ಬಾಳು ಹಾಳಾದ ಹಾಗೆ ಆಗುತ್ತೆ. ಅವಳಿಗೆ ಮದುವೆ ಮಾಡಬೇಡ. ನೀನು ಎರಡನೇ ಮದುವೆ ಯಾಕೆ ಮಾಡಿಕೊಂಡೆ. 10 ವರ್ಷದ ಹಿಂದೆ ನನಗೆ ಗೊತ್ತಿದ್ದರೆ ನಾನು ನಿನ್ನನ್ನು ಹಾರಿಸಿಕೊಂಡು ಹೋಗುತ್ತಿದ್ದೆ. ನೀನು ಚೆನ್ನಾಗಿದ್ದೀಯ ಅಂತ ನಿನಗೆ ಕೊಬ್ಬಾ. ನಾನು ಹತ್ತು ವರ್ಷ ಇರುತ್ತೀನಿ. ಈ ಹತ್ತು ವರ್ಷದಲ್ಲಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮೂರ್ತಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂರ್ತಿ ಅವರ ಕಿರುಕುಳದ ಬಗ್ಗೆ  ಒಂದು ತಿಂಗಳ ಹಿಂದೆಯೇ ಹಿರಿಯ ಅಧಿಕಾರಿಗಳಿಗೆ ಅಲ್ಲದೇ ಕಾನೂನು ಸಚಿವ ಜಯಚಂದ್ರರಿಗೂ ದೂರು ನೀಡಿದ್ದೆ. ಸಚಿವರು ಕಾರ್ಯದರ್ಶಿಯನ್ನು ಕರೆದು ಎಚ್ಚರಿಕೆ ನೀಡಿದ್ದರು. ಸಚಿವರ ಎಚ್ಚರಿಕೆಯನ್ನು ಲೆಕ್ಕಿಸದೇ ಮೂರ್ತಿ ತನ್ನ ಚಾಳಿ ಮುಂದುವರೆಸಿದ್ದು ನೊಂದ ನಾನು ಜಯಚಂದ್ರ ಅವರಿಗೆ ಪತ್ರದ ಮುಖಾಂತರ ದೂರು ನೀಡಿದ್ದೇನೆ ಎಂದು  ದೂರಿನಲ್ಲಿ ತಮಗೆ ನೀಡಿರುವ ಕಿರುಕುಳದ ಮಾಹಿತಿ ನೀಡಿದ್ದಾರೆ.

ಈಗಾಗಲೇ ಮೂರ್ತಿ ಮೇಲೆ ಲೋಕಾಯುಕ್ತದಲ್ಲಿ ದೂರು ನೀಡಲಾಗಿದ್ದು, ಎರಡು ಬಾರಿ ನೋಟಿಸ್ ನೀಡಿದ್ದರೂ ಗೈರು ಹಾಜರಾಗಿದ್ದರು. ಮೂರ್ತಿ ವಿರುದ್ಧ ಹಲವು ಮಹಿಳಾ ಅಧಿಕಾರಿಗಳು ಲೈಂಗಿಕ ಕಿರುಕುಳದ ಬಗ್ಗೆ ಸ್ಪೀಕರ್ ಗೆ ಮೌಖಿಕ ದೂರು ನೀಡಿದ್ದರೂ ಸ್ಪೀಕರ್ ಕ್ರಮ ಕೈಗೊಂಡಿಲ್ಲ ಎನ್ನುವ ಕೂಗು ಕೇಳಿ ಬಂದಿದೆ. ಹಿಂದೆ ಮೂರ್ತಿ ಆಡಳಿತಕ್ಕೆ ಬೇಸೆತ್ತು ಮಹಿಳಾ ಅಧಿಕಾರಿಗಳು ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದ್ದ ವೇಳೆ ಸ್ಪೀಕರ್ ಮೂರ್ತಿಯ ಮೇಲೆ ಅನುಕಂಪ ತೋರಿಸಿ ಮಹಿಳಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ