ನೀರುಪಾಲಾಗಿದ್ದ ಯುವಕರ ಶವ ಪತ್ತೆ

2 dead bodies found

21-11-2017

ಬೆಂಗಳೂರು: ರಾಮನಗರದ ಹುಲಿಕೆರೆಯ ಅರ್ಕಾವತಿ ನದಿ ಬಳಿ ನಿನ್ನೆ ಹೊಳೆ ದಾಟುವಾಗ ಬೈಕ್ ಸಮೇತ ನಿರುಪಾಲಾಗಿದ್ದ ಇಬ್ಬರು ಯುವಕರ ಮೃತ ದೇಹಗಳು ಪತ್ತೆಯಾಗಿವೆ. ರಾಮನಗರದ ಯಾರಬ್ ನಗರ ಜುಲ್ಫಿಕರ್ (20) ಮತಿನ್ (22) ಮೃತದೇಹಗಳನ್ನು ಇಂದು ಬೆಳಿಗ್ಗೆ ಹೊರತೆಗೆಯಲಾಗಿದೆ. ನಿನ್ನೆ ಮಧ್ಯಾಹ್ನ ಅರ್ಕಾವತಿ ನದಿ ಬಳಿ ಹೊಳೆ ದಾಟುವಾಗ ಬೈಕ್ ಸಮೇತ ಯುವಕರು ಕೊಚ್ಚಿ ಹೋಗಿದ್ದರು. ರಾತ್ರಿಯೆಲ್ಲಾ ನಿರಂತರ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

Ramnagar Arkavati ನಿರುಪಾಲು ಗ್ರಾಮಾಂತರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ