ಮೋದಿ ವಿರುದ್ಧ ಖರ್ಗೆ ಕೆಂಡಾಮಂಡಲ !

Kharge angery on BJP

21-11-2017

ನವದೆಹಲಿ: ಸಂಸತ್ ಅಧಿವೇಶನ ಕೇಂದ್ರ ಸರ್ಕಾರಕ್ಕೆ ತಮಾಷೆಯಾಗಿದೆ, ಅಧಿವೇಶನಕ್ಕಿಂತ ಗುಜುರಾತ್ ಚುನಾವಣೆ ಮುಖ್ಯವಾಗಿದೆ, ಗುಜುರಾತ್ ಚುನಾವಣೆ ಗಾಗಿ ಸಂಸತ್ ಭವನಕ್ಕೆ ಬೀಗ ಹಾಕಲಾಗಿದೆ ಎಂದು, ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಅವರು, ಸಂಸತ್ ಅಧಿವೇಶನದಲ್ಲಿ ಜನರ ಕಷ್ಟ, ಜಿಎಸ್‌ಟಿ, ನೋಟ್ ಬ್ಯಾನ್, ಭ್ರಷ್ಟಾಚಾರ ವಿಷಯಗಳು ಚರ್ಚೆ ಆಗಬೇಕಿತ್ತು, ಆದರೆ ಇದ್ಯಾವುದು ಆಗುತ್ತಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಮೋದಿ ಸರ್ಕಾರದಿಂದ ದಕ್ಕೆಯಾಗುತ್ತಿದೆ ಎಂದು ಕಿಡಿಕಾರಿದರು.

2014ರ ಚುನಾವಣೆ ಬಳಿಕ ಮೋದಿ, ಸಂಸತ್ ಬಾಗಿಲಿಗೆ ನಮಸ್ಕಾರ ಮಾಡಿ ಒಳ ಬಂದಿದ್ರು, ಸಂಸತ್ ಭವನ ಪ್ರಜಾಪ್ರಭುತ್ವ ದೇಗುಲ ಎಂದಿದ್ರು, ಇಂದು ಸಂಸತ್ ಭವನ ಮೋದಿ ಸರ್ಕಾರದಿಂದಲೇ ನಾಶವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಬ್ರಹ್ಮನ ಆದೇಶವಾಗುವರೆಗೂ ಅಧಿವೇಶನದ ದಿನಾಂಕ ಯಾರಿಗೂ ತಿಳಿಯುವುದಿಲ್ಲ, ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

mallikarjun Kharge New delhi ಲೋಕಸಭೆ ಅಧಿವೇಶನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ