ಬಿಗ್ ಬಾಸ್ ವಿಜೇತ ಪ್ರಥಮ್ ಆತ್ಮಹತ್ಯೆ ಯತ್ನ ಹಿನ್ನೆಲೆ ನಿಮ್ಹಾನ್ಸ್ ಗೆ ಸ್ಥಳಾಂತರ

Kannada News

06-04-2017 524

ಬೆಂಗಳೂರು,ಏ.6 :- ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್‍ಬಾಸ್ 4ನೇ ಆವೃತ್ತಿಯ ವಿಜೇತ  ಪ್ರಥಮ್‍ನನ್ನು ಪೋರ್ಟಿಸ್ ಆಸ್ಪತ್ರೆಯಿಂದ ದಿಢೀರ್ ನಿಮ್ಹಾನ್ಸ್ಗೆ ಸೇರಿಸಲಾಗಿದ್ದು ಅಲ್ಲೂ ಆತನ ಹುಚ್ಚು ಹೆಚ್ಚಾಗಿದ್ದರಿಂದ ವೈದ್ಯರು ಸಿಬ್ಬಂದಿ ರೋಸಿ ಹೋಗಿದ್ದಾರೆ.
ಬುಧವಾರ ತಡರಾತ್ರಿ ಪ್ರಥಮ್ ಹುಚ್ಚಾಟಕ್ಕೆ ಸುಸ್ತಾಗಿ ಹೋದ ನಿಮ್ಹಾನ್ಸ್ ವೈದ್ಯರು, ಸಿಬ್ಬಂದಿ ಅಲ್ಲಿಂದ ಗುರುವಾರ ಮುಂಜಾನೆ ಕಿಮ್ಸ್ಗೆ ಸ್ಥಳಾಂತರಿಸಿದ್ದಾರೆ ಕಿಮ್ಸ್ನಲ್ಲಿ ಪ್ರಥಮ್‍ಗೆ ಸಾಕಷ್ಟು ರಕ್ಷಣಾ ಕ್ರಮಗಳ ಜೊತೆ ಚಿಕಿತ್ಸೆ ನೀಡಲಾಗುತ್ತಿದ್ದು ಆತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ.
ಕಿಮ್ಸ್ ಆಸ್ಪತ್ರೆಗೆ ಇಂದು ಮುಂಜಾನೆ 4.30 ಕ್ಕೆ ಪ್ರಥಮ್‍ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತ 20 ನಿದ್ದೆ ಮಾತ್ರೆ ತೆಗೆದುಕೊಂಡಿರುವುದಾಗಿ ಹೇಳುತ್ತಿದ್ದಾನೆ.ಆದರೆ 2 ಮಾತ್ರೆ ಮಾತ್ರ ಸೇವಿಸಿರಬಹುದು  ನಿದ್ದೆ ಮಾತ್ರೆ ತೆಗೆದುಕೊಂಡಾಗ ಉಸಿರಾಟ ಹಾಗು ವಾಂತಿ ಆಗುತ್ತದೆ ಆದರೆ ಪ್ರಥಮ್‍ಗೆ ಇದ್ಯಾವುದೂ ಆಗಿಲ್ಲ. ಒತ್ತಡ(ಸ್ಟ್ರೆಸ್) ಇದ್ದರೆ ಮಾತ್ರ ಆ ರೀತಿ ಆಡುತ್ತಾರೆ. ಕೇವಲ ನಿದ್ದೆ ಮಾತ್ರೆಯಿಂದ ಹೀಗಾಡುವುದಿಲ್ಲ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ಯಾವುದೇ ರೋಗ ನಿರೋಧಕ ನೀಡಲಾಗಿಲ್ಲ ಎಂದು ಕಿಮ್ಸ್ ಆಸ್ಪತ್ರೆ ವೈದ್ಯ ನಾಗೇಶ್ ತಿಳಿಸಿದ್ದಾರೆ.
ನಿದ್ದೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು  ಚಿಕಿತ್ಸೆ ಪಡೆಯುತ್ತಿದ್ದ ಫೋರ್ಟಿಸ್ ಆಸ್ಪತ್ರೆಯಲ್ಲಿ ರಂಪಾಟ ನಡೆಸಿದ್ದರಿಂದ ಬುಧವಾರ ತಡರಾತ್ರಿ ಪ್ರಥಮ್‍ನನ್ನು ನಿಮ್ಹಾನ್ಸ್‍ಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಅಲ್ಲೂ ಕೂಡ ರೋಗಿಗಳು ಹಾಗೂ ಸಿಬ್ಬಂದಿಗೆ ಪೀಕಲಾಟ ಶುರುವಾಗಿತ್ತು.
ಪ್ರಥಮ್ ಫೋರ್ಟಿಸ್ ಆಸ್ಪತ್ರೆಯಲ್ಲಿ ಅರೆನಗ್ನನಾಗಿ ಓಡಾಡಿ ಐಸಿಯುನಲ್ಲಿರೋ ವಸ್ತುಗಳನ್ನ ಒಡೆದು ಹಾಕಿ ಗಲಾಟೆ ಮಾಡಿದ್ದರು. ಹಾಗಾಗಿ ಹುಚ್ಚಾಟ ಕಂಡು ಅವರನ್ನು ನಿಮ್ಹಾನ್ಸ್ಗೆ ಸ್ಥಳಾಂತರಿಸಲಾಗಿತ್ತು. ಅಲ್ಲೂ ಕೂಡ ಗಲಾಟೆ ಹೆಚ್ಚಾಗಿದ್ದರಿಂದ ಕಿಮ್ಸ್ಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ರಾತ್ರಿ ಫೋರ್ಟಿಸ್ ಆಸ್ಪತ್ರೆಗೆ ಬಂದ ಪೊಲೀಸರ ಮಾತು ಕೇಳದೆ ಚೀರಾಡುತ್ತಾ ತನ್ನನ್ನು ಆಸ್ಪತ್ರೆಯಿಂದ ಬಿಟ್ಟುಬಿಡಿ ಅಂತ ಒಂದೇ ಸಮನೆ ಒದ್ದಾಟ ನಡೆಸುತ್ತಿದ್ದ. ತಡರಾತ್ರಿ ನಡೆದ ಹೈಡ್ರಾಮಾಗೆ ಬೇಸತ್ತ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ಪ್ರಥಮ್‍ನನ್ನು ನಿಮ್ಹಾನ್ಸ್ಗೆ ಸ್ಥಳಾಂತರಿಸಿದ್ದರು. 
ಇದಕ್ಕೂ ಮುನ್ನ ಪ್ರಥಮ್‍ನನ್ನ ಭೇಟಿ ಮಾಡಲು ಫೋರ್ಟಿಸ್ ಆಸ್ಪತ್ರೆಗೆ ಸ್ನೇಹಿತ ಲೋಕಿ ಹಾಗೂ ಗೆಳೆಯರು ಆಗಮಿಸಿದ್ದರು. ಪ್ರಥಮ್ ವಿರುದ್ಧ ದೂರು ನೀಡಿದ್ದ ಲೋಕಿ, ರಾಜಿ ಸಂಧಾನದಿಂದ ದೂರು ವಾಪಸ್ ತೆಗೆದುಕೊಳ್ಳುವ ಸಂಭವವಿತ್ತು.
ಪ್ರಥಮ್ ತಂದೆ ತಾಯಿ ಜೊತೆ ಮಾತುಕತೆ ನಡೆಸಲಾಗಿತ್ತು. ಅಲ್ಲಿಯವರೆಗೂ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರು ಹಾಗೆಯೇ ಇರಲಿದೆ ಎಂದು ಲೋಕಿ ಹೇಳಿಕೆ ನೀಡಿದ್ದರು.
ಈ ನಡುವೆ ಪ್ರಥಮ್ ವಿರುದ್ದ ಅನ್ನಪೂರ್ಣೇಶ್ವರಿ ಪೊಲೀಸರು ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಪ್ರಥಮನದು ಅಧಿಕತನದ ಪರಮಾವಧಿ. ನಿಜ, ಅಲ್ಪನಿಗೆ ಐಶ್ವರ್ಯ ಸಿಕ್ಕರೆ ಮಧ್ಯ ರಾತ್ರಿ ಕೊಡೆ ಹಿಡಿತ್ತಾರೆ ಅಂದ ಹಾಗೆ. ಜನರು ಅವನಿಗೆ ಹುಚ್ಚು ಹಿಡಿಯುವ ಹಾಗೆ ಮಾಡಿದ್ದಾರೆ. ತಂದೆ ತಾಯಿಯರಿಂದ ಒಂಬತ್ತು ವರ್ಷಗಳು ಸಂಪೂರ್ಣ ದೂರ ಇದ್ದರೂ ಸಹ ಜನರು ಅವನನ್ನು ಒಳ್ಳೆ ಹುಡುಗ ಒಳ್ಳೆ ಹುಡುಗ ಎಂದು ಬಿಗ್ ಬಾಸ್ ನಲ್ಲಿ ಮತ ಹಾಕಿ ಗೆಲ್ಲಿಸಿದರು. ಅವನ ಹುಚ್ಚು ಕೂಗಾಟ ಸಹ ಹಿತವಾಗಿ ಕಂಡಿದೆ ಜನರಿಗೆ. ಅವನು ಬುಧ್ದಿವಂತನಿರಬಹುದು ಹಾಗೆ ತುಂಬಾ ನೆನಪಿರುವ ವ್ಯಕ್ತಿಯು ಆಗಿರಬಹುದು. ಆದರೆ ಏನು ಪ್ರಯೋಜನ, ಯಾರಿಗೂ ಮರ್ಯಾದೆ ಕೊಡುವ ಒಳ್ಳೆಯ ಬುಧ್ದಿಯೂ ಇಲ್ಲ. ಹಾಗಾಗಿ ಅವನ ಬಗ್ಗೆ ಯಾರು ಬೆಲೆ ಕೊಡುವ ಅಗತ್ಯವಿಲ್ಲ ಎಂಬುವುದು ನನ್ನ ಅನಿಸಿಕೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಪ್ರಥಮನಿಗೆ ಬಿಗ್ ಬಾಸ್ ಕೊಟ್ಟ ೫೦ ಲಕ್ಷ ಹಣವನ್ನು ವಾಪಸ್ಸು ಪಡೆಯಬೇಕು ಎಂಬುವುದು ನನ್ನ ವಾದ.
  • ಪಾರ್ವತಿ ಶ್ರೀರಾಮ
  • ಸಮಾಜ ಸೇವೆ