ವೈದ್ಯರಿಗೆ ರಮೇಶ್ ಕುಮಾರ್ ಎಚ್ಚರಿಕೆ !

Ramesh Kumar warns doctor

20-11-2017

ಬೆಳಗಾವಿ: ಖಾಸಗಿ ಔಷಧಾಲಯಗಳಿಂದ ಬ್ರಾಂಡೆಂಡ್ ಹೆಸರಿನಲ್ಲಿ ಔಷಧಿ ಖರೀದಿಸುವಂತೆ ಸಲಹಾ ಚೀಟಿ ಬರೆದು ಕೊಡುವ ಸರ್ಕಾರಿ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧಾನಪರಿಷತ್ತಿನಲ್ಲಿಂದು ಎಚ್ಚರಿಕೆ ನೀಡಿದ್ದಾರೆ. 

ಪ್ರಶ್ನೋತ್ತರ ಅವಧಿಯಲ್ಲಿ ಈ ಮಾಹಿತಿ ನೀಡಿದ ಅವರು, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲೇ ಔಷಧ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿಂದಲೇ ಔಷಧ ಖರೀದಿಸಲು ಅನುಕೂಲ ಆಗುವ ರೀತಿಯಲ್ಲಿ ಸಲಹಾ ಚೀಟಿ ನೀಡಬೇಕು. ಒಂದು ವೇಳೆ ಯಾವುದಾದರೂ ಔಷಧ ಸರ್ಕಾರಿ ಮಳಿಗೆಯಲ್ಲಿ ಸಿಗದಿದ್ದರೆ ಮಾತ್ರ ಅದನ್ನು ಹೊರಗಿನಿಂದ ಖರೀದಿಸಲು ವೈದ್ಯರಿಗೆ ಹಣದ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಬ್ರಾಂಡೆಡ್ ಔಷಧಿಗಳ ಬೆಲೆಗೂ, ಜನೌಷಧಿಗಳಿಗೂ ಬೆಲೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಬಡಜನರಿಗೆ ಕೈಗೆಟಕುವ ಬೆಲೆಯಲ್ಲಿ ಅತ್ಯುತ್ತಮ ಔಷಧಿಗಳನ್ನು ಒದಗಿಸುವುದು ಜನೌಷಧಿಯ ಉದ್ದೇಶವಾಗಿದೆ ಎಂದರು. ರೋಗಿಗಳಿಗೆ ಜನೌಷಧಿಗಳನ್ನೇ ಸಲಹೆ ಮಾಡುವಂತೆ ಎಲ್ಲಾ ಹಂತದ ವೈದ್ಯರು, ತಜ್ಞ ವೈದ್ಯರಿಗೆ ಸಲಹೆ ಮಾಡಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Raemesh kumar council ಔಷಧಾಲಯ ಆರೋಗ್ಯ ಸಚಿವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ