ಉಡುಪಿ ಕೃಷ್ಣ ಮಠದಲ್ಲಿ ರಾಜಸ್ಥಾನ ಸಿಎಂ

Rajasthan CM visits Udupi temple

20-11-2017

ಉಡುಪಿ: ಉಡುಪಿಯ ಕೃಷ್ಣಮಠಕ್ಕಿಂದು ರಾಜಸ್ಥಾನದ ಸಿಎಂ ವಸುಂಧರಾ ರಾಜೆ ಭೇಟಿ ನೀಡಿದ್ದು, ದರ್ಶನದ ನಂತರ ಮಾತನಾಡಿದ ಅವರು, ಇದು ನನ್ನ ಪ್ರಥಮ ಭೇಟಿ, ಇದೊಂದು ಎಂದೂ ಮರೆಯದ ಭೇಟಿ ಎಂದು ಸಂತೋಷದಿಂದ ಹೇಳಿದ್ದಾರೆ. ನಮ್ಮ ಇಡೀ ಕುಟುಂಬ ಪೇಜಾವರ ಶ್ರೀ ಗಳ ನಿಕಟವರ್ತಿಗಳು, ನಾಲ್ಕು ತಲೆಮಾರಿನಿಂದ ಕೃಷ್ಣಮಠದ ಜೊತೆ ನಿಕಟ ಬಾಂಧವ್ಯವಿದೆ, ಐದನೇ ಪರ್ಯಾಯದಲ್ಲಿ ಭಾಗಿಯಾಗಿರುವುದು ನಮ್ಮ ಅದೃಷ್ಟ, ನಾನು ನನ್ನ ಮಗ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ ಎಂದು ತಿಳಿಸಿದರು. ದೇವರು ಬಯಸದೆ ದೇವಸ್ಥಾನಕ್ಕೆ ತೆರಳಲು ಸಾಧ್ಯವಿಲ್ಲ, ಕೊಲ್ಲೂರು ದೇವಸ್ಥಾನಕ್ಕೆ ಬರಲು ಬಹಳ ಬಾರಿ ಪ್ರಯತ್ನಪಟ್ಟೆ, ಇಂದು ಮೂಕಾಂಬಿಕೆಯ ದರ್ಶನ ಪಡೆದು ಕೃತಾರ್ಥಳಾದೆ ಎಂದು ನುಡಿದರು.

ಇನ್ನು ಬಾಲಿವುಡ್ ನ ಪದ್ಮಾವತಿ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ವಸುಂಧರಾ ರಾಜೇ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಸಚಿವೆ ಸ್ಮೃತಿ ಇರಾನಿಗೆ ಪದ್ಮಾವತಿ ಚಿತ್ರ ತಡೆಹಿಡಿಯುವಂತೆ ಕೋರಿ ಪತ್ರ ಬರೆದಿರುವುದಾಗಿ ತಿಳಿಸಿದರು.

 

 

 

 

 

 

 


ಸಂಬಂಧಿತ ಟ್ಯಾಗ್ಗಳು

Vasundhara raje rajsthan ಉಡುಪಿ ಪೇಜಾವರ ಶ್ರೀ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ