ಶಾಸಕರ ಗೈರು: ಶೆಟ್ಟರ್ ಗರಂ

Shettar angry on MLAs

20-11-2017

ಬೆಳಗಾವಿ: ಮಹಾದಾಯಿ-ಕಳಸಾಬಂಡೂರಿ ನಾಲಾ ಅನುಷ್ಟಾನ, ಪ್ರಾದೇಶಿಕ ಅಸಮಾನತೆ ನಿವಾರಣೆ ಉದ್ದೇಶದ ಡಾ” ನಂಜುಂಡಪ್ಪ ವರದಿ ಜಾರಿ ಮತ್ತು ಹೈದ್ರಾಬಾದ್ ಕರ್ನಾಟಕ ಪ್ರದೆಶಾಭಿವೃದ್ಧಿಗಾಗಿ ಜಾರಿಗೆ ತಂದಿರುವ 371 ಜೆ-ತಿದ್ದುಪಡಿ ಕಾಯಿದೆ ಜಾರಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಸದನದಲ್ಲಿ ಮಂಡಿಸಬೇಕು ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 4 ವರ್ಷಗಳ ಅವಧಿಯಲ್ಲಿ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಎಷ್ಟು ಹಣ ಖರ್ಚು ಮಾಡಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದರು.

ಸದನ ನಡೆಯುವಾಗ ಅಧಿಕಾರಿಗಳು ಮತ್ತು ಸಚಿವರು ಕಡ್ಡಾಯವಾಗಿ ಹಾಜರಿರಲೇಬೇಕು ಎಂಬ ನಿಯಮ ಪಾಲನೆಯಾಗುತ್ತಿಲ್ಲ ಎಂದು ಶೆಟ್ಟರ್ ಅಸಮಧಾನ ವ್ಯಕ್ತಪಡಿಸಿದಾಗ, ದನಿಗೂಡಿಸಿದ ಜೆಡಿಎಸ್‍ನ ಉಪನಾಯಕ ವೈ.ಎಸ್.ವಿ.ದತ್ತಾ ಸಚಿವರು ಮತ್ತು ಅಧಿಕಾರಿಗಳು ಸದನವನ್ನು ಲಘುವಾಗಿ ಪರಿಗಣಿಸುವುದು ಒಳ್ಳೆಯ ಸಂಪ್ರದಾಯವಲ್ಲ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

Kalasa banduri Nanjundappa report ವೈ.ಎಸ್.ವಿ.ದತ್ತಾ ಸದನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ