ಕರವೇ ಮುಖಂಡನ ಬಂಧನ

rakshana vedike local leader arrested

20-11-2017

ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಹೊಟೇಲ್ ಮ್ಯಾನೇಜರ್ ಒಬ್ಬರನ್ನು ಅಡ್ಡಗಟ್ಟಿ ಅಪಹರಿಸಿ ಸುಲಿಗೆ ಮಾಡಿದ್ದ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಮುಖಂಡನೊಬ್ಬನನ್ನು ಹಲಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೋಗುಪಾಳ್ಯದ ವರುಣ್ (21) ಬಂಧಿತ ಆರೋಪಿಯಾಗಿದ್ದು, ಈತ ಜೋಗುಪಾಳ್ಯ ವಾರ್ಡ್‍ನ ಕರವೇ ಅಧ್ಯಕ್ಷನಾಗಿದ್ದಾನೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ರಾಮಮೂರ್ತಿ ನಗರದ ರಿಷಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗಿದೆ. ಒನ್ ಎಂ.ಜಿ. ಮಾಲ್‍ನಲ್ಲಿ ಹೊಟೇಲ್ ಮ್ಯಾನೇಜರ್ ಆಗಿದ್ದ ಜೋಗುಪಾಳ್ಯದ ವಲ್ಸನ್ ರಾತ್ರಿ 1.30ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಜೋಗುಪಾಳ್ಯದ ಮುಖ್ಯರಸ್ತೆಯಲ್ಲಿ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಬೈಕ್‍ನಲ್ಲಿ ಬಂದ ಆರೋಪಿ ವರುಣ್ ಹಾಗೂ ರಿಷಿ, ವಲ್ಸನ್ ನನ್ನು ಅಡ್ಡಗಟ್ಟಿ ಅಪಹರಿಸಿದ್ದಾರೆ. ಬೈಕ್‍ನಲ್ಲಿ ಕರೆದುಕೊಂಡು ಹೋಗಿ ಅವರ ಎಟಿಎಂನಿಂದ 3,100 ನಗದು, 5 ಸಾವಿರ ಮೌಲ್ಯದ ವಾಚು, ಜೇಬಿನಲ್ಲಿದ್ದ ಹಣ ಕಸಿದು, ಮಾರ್ಗಮಧ್ಯೆ ಬಿಟ್ಟು ಪರಾರಿಯಾಗಿದ್ದಾರೆ.  ಸುಲಿಗೆ ಸುದ್ದಿ ತಿಳಿದ ಕೂಡಲೇ ಕಾರ್ಯಾಚರಣೆ ನಡೆಸಿದ ಹಲಸೂರು ಪೊಲೀಸರು ಕೃತ್ಯ ನಡೆದ ಒಂದು ಗಂಟೆಯಲ್ಲೇ ವರುಣ್‍ನನ್ನು ಬಂಧಿಸಿ, ಮತ್ತೊಬ್ಬನಿಗಾಗಿ ಶೋಧ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbery Rakshana vedike ಸುಲಿಗೆ ಪ್ರವೀಣ್ ಶೆಟ್ಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ