‘ಸಂಚಾರ ನಿಯಮಗಳ ಜಾಗೃತಿ ಅತಿಮುಖ್ಯ’

Awaring about traffic rules are important

20-11-2017

ಬೆಂಗಳೂರು: ಸಂಚಾರ ನಿಯಮಗಳ ಪಾಲನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತಿಮುಖ್ಯವಾಗಿದೆ. ಸಂಚಾರ ನಿಯಮ ಪಾಲನೆಯಿಂದ ಸಂಚಾರ ದಟ್ಟಣೆ ನಿವಾರಿಸುವುದಲ್ಲದೆ, ಅಪಘಾತಗಳನ್ನು ಕಡಿಮೆ ಮಾಡಬಹುದು ಎಂದು ಡಿಸಿಪಿ ಅಭಿಷೇಕ್ ಗೋಯೆಲ್ ತಿಳಿಸಿದ್ದಾರೆ.

ಸಂಚಾರ ದಟ್ಟಣೆ ನಿವಾರಣೆಗೆ ಶಕ್ತಿ ಮೀರಿ ಶ್ರಮಿಸುತ್ತಿರುವ ಸಂಚಾರ ಪೊಲೀಸರಿಗೆ ನೆರವಾಗಲು ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮುಖ್ಯವಾಗಿದೆ ಎಂದರು. ಶಾಂತಿನಗರದ ಸೆಂಟ್ ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ನಡೆದ 13ನೇ ಸಂಚಾರ ಪೊಲೀಸ್ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಲಾ-ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಅರಿವು ಮೂಡಿಸುವುದು ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉತ್ತರ ವಲಯದ ಡಿಸಿಪಿ ಸಾರಾ ಪಾತಿಮಾ, ಸಂಚಾರ ದಿನಾಚರಣೆ ಆಯೋಜಿಸಿದ್ದ ಸಿಎಂಸಿಎ ಸಂಸ್ಥೆಯ ಮುಖ್ಯಸ್ಥ ಆಶೀಶ್ ಪಟೇಲ್, ನಗರದ ವಿವಿಧ ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ