ಬಿಜೆಪಿ ಮುನ್ನೆಚ್ಚರಿಕಾ ಸಭೆ..!

BJP Precautionary Meeting

20-11-2017

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮದ ವೈಫಲ್ಯ ಹಿನ್ನೆಲೆ, ಬೆಂಗಳೂರು ಸಮಾವೇಶದಿಂದ ಪಾಠ ಕಲಿತಿರುವ ಬಿಜೆಪಿ ನಾಯಕರು, ಹುಬ್ಬಳ್ಳಿಯಲ್ಲಿ ನಡೆಯಲಿರುವ ಎರಡನೇ ಹಂತದ ಸಮಾವೇಶಕ್ಕೆ ಭಾರೀ ಮುನ್ನೆಚ್ಚರಿಕೆ ವಹಿಸಿದ್ದಾರೆ. ಹುಬ್ಬಳ್ಳಿಯಲ್ಲಿನ ಸಮಾವೇಶ ಡಿಸೆಂಬರ್ 21 ರಂದು ನಡೆಯಲಿದ್ದು, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರು ಭಾಗಿಯಾಗಿದ್ದು, ಬೆಂಗಳೂರಿನ ವೈಫಲ್ಯ ಮರುಕಳಿಸದಂತೆ ನೋಡಿಕೊಳ್ಳಲು ನಿರ್ಧಾರ ಕೈಗೊಂಡಿದ್ದಾರೆ.

ಹುಬ್ಬಳ್ಳಿ ಸಮಾವೇಶದ ಹೊಣೆಯನ್ನು ಯಾರಿಗೂ ನೀಡದಿರಲು ಸಭೆಯಲ್ಲಿ ನಿರ್ಧಾರ ಮಾಡಿದ್ದು, ಬಿಜೆಪಿ ಪಕ್ಷದ ವತಿಯಿಂದಲೇ ಸಾಮೂಹಿಕವಾಗಿ ಉಸ್ತುವಾರಿ ವಹಿಸಲು ನಿರ್ಧರಿಸಿದ್ದಾರೆ. ಬೆಂಗಳೂರಿನ ಸಮಾವೇಶದ ಉಸ್ತುವಾರಿ ಆರ್.ಅಶೋಕ್ ಮತ್ತು ಶೋಭಾ ಕರಂದ್ಲಾಜೆ ವಹಿಸಿಕೊಂಡಿದ್ದರು. ಆದರೆ ಉಭಯ ನಾಯಕರ ಮಧ್ಯೆ ಭಿನ್ನಾಭಿಪ್ರಾಯದಿಂದ ಬೆಂಗಳೂರು ಸಮಾವೇಶ ವಿಫಲವಾಗಿದೆ ಎನ್ನಲಾಗಿದ್ದು, ಇದರ ಪರಿಣಾಮ ಸಮಾವೇಶಕ್ಕೆ ಕಾರ್ಯಕರ್ತರು ಗೈರಾಗಿದ್ದರು ಎಂದು ಹೇಳಲಾಗುತ್ತಿದೆ. ಬೆಂಗಳೂರು ಸಮಾವೇಶದಿಂದ ಸಿಟ್ಟಾಗಿರುವ ಅಮಿತ್ ಷಾ ಅವರ ಒಲವು ಗಳಿಸಲು ಹುಬ್ಬಳ್ಳಿ ಸಮಾವೇಶ ಯಶಸ್ವಿಗೊಳಿಸಲು ನಾಯಕರು ಪಣತೊಟ್ಟಿದ್ದಾರೆ. ಸಮಾವೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಲು ನಿರ್ಧಾರಿಸಲಾಗಿ,  ಕಾರ್ಯಕರ್ತರ ಹಾಜರಿಗೆ ವಿಶೇಷ ನಿಗಾ ವಹಿಸಲಿದ್ದಾರೆ ಎನ್ನಲಾಗಿದೆ. ಹುಬ್ಬಳ್ಳಿ ಸಮಾವೇಶದ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನಗೊಳ್ಳಲಿದೆಯೋ ಅಥವ ಬೆಂಗಳೂರಿನಲ್ಲಾದಂತಹ ಪರಿಸ್ಥಿತಿ ಎದುರಾಗಲಿದೆಯೋ ಕಾದು ನೋಡಬೇಕಾಗಿದೆ.


ಸಂಬಂಧಿತ ಟ್ಯಾಗ್ಗಳು

Jagadish shettar Hubballi ಸಮಾವೇಶ ಉತ್ತರ ಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ