ಕೊಲೆಗಡುಕರ ಬಂಧನ !

killers arrested

20-11-2017

ಬೆಂಗಳೂರು: ಮಹಾಲಕ್ಷ್ಮಿಲೇಔಟ್ ಮೆಟ್ರೋ ನಿಲ್ದಾಣದ ಬಳಿ, ಆಟೋ ಚಾಲಕ ಆಂಡ್ರೋಸ್‍ನನ್ನು ಮಚ್ಚಿನಿಂದ ಕೊಚ್ಚಿ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆಗೈದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ನಂದಿನಿ ಲೇಔಟ್‍ನ ಜಯಮಾರುತಿ ನಗರದ ರಾಕೇಶ್ ಅಲಿಯಾಸ್ ರಾಖಿ(22), ಮಣಿ(25), ವಿನಯ್ ಅಲಿಯಾಸ್ ವಿನಿ (20),ಕಮ್ಮಗೊಂಡನಹಳ್ಳಿಯ ರಾಜಶೇಖರ್ ಅಲಿಯಾಸ್  ಶೇಖರ್ (26), ದೊಡ್ಡಬಿದರಕಲ್ಲು ಮಾರಣ್ಣ ಲೇಔಟ್ ಚಂದನ್ ಅಲಿಯಾಸ್ ಚಂದು(25)ಬಂಧಿತ ಆರೋಪಿಗಳಾಗಿದ್ದಾರೆ.

ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸರತಿ ಸಾಲು ಉಲ್ಲಂಘಿಸಿ, ಆಂಡ್ರೋಸ್ ಆಟೋ ನಿಲ್ಲಿಸುತ್ತಿದ್ದರಿಂದ ರೊಚ್ಚಿಗೆದ್ದ ಐವರು ಕಳೆದ ನ.14ರಂದು ಮಹಾಲಕ್ಷ್ಮಿಲೇಔಟ್ ಮೆಟ್ರೋ ನಿಲ್ದಾಣದ ಬಳಿಯ ಖಾಲಿ ಜಾಗದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಮಹಾಲಕ್ಷ್ಮಿಲೇಔಟ್ ಪೊಲೀಸರು ಬಂಧಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್‍ಸಿಂಗ್ ರಾತೋರ್ ತಿಳಿಸಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ