ಅಂಗವಿಕಲನಿಗೆ ಮಂಗಳ ಮುಖಿಯರ ಕಿರುಕುಳ !

Complaint against Harassment

20-11-2017

ಬೆಂಗಳೂರು: ಬಾಡಿಗೆದಾರರಿದ್ದ ಅಂಗಡಿ ಖಾಲಿ ಮಾಡಿಸಲು, ಮಾಲೀಕನೋರ್ವ ಮಂಗಳಮುಖಿಯರನ್ನು ಬಿಟ್ಟು ಕಿರುಕುಳ ನೀಡಿರುವ ಘಟನೆ ಬಾಬೂಸಾಬ್ ಪಾಳ್ಯದಲ್ಲಿ ನಡೆದಿದೆ. ಅಂಗಡಿ ಬಾಡಿಗೆಗೆ ಕೊಟ್ಟಿದ್ದ ಮಾಲೀಕ ರಮೇಶ್ ಬಾಡಿಗೆ ಒಪ್ಪಂದ ಮಾಡಿಕೊಂಡ ಅವಧಿ ಇನ್ನೂ ಇದ್ದರೂ ಖಾಲಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಡಿಗೆದಾರ ಸಂತೋಷ್ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮನೆ ಮತ್ತು ಅಂಗಡಿ ಮಾಡಿಕೊಂಡು ತಿಂಗಳಿಗೆ ಸರಿಯಾಗಿ ಬಾಡಿಗೆ ಕಟ್ಟುತ್ತಿದ್ದರೂ ಅಂಗವಿಕಲನಾದ ನನಗೆ ಮಾಲೀಕ ರಮೇಶ್ ಕಿರುಕುಳ ನೀಡುತ್ತಿದ್ದಾರೆ. ಅಂಗಡಿ ಖಾಲಿ ಮಾಡಿಸಲು ರಿಯಲ್ ಎಸ್ಟೇಟ್ ಮಾಫಿಯಾದವರು,ಮಂಗಳಮುಖಿಯರನ್ನು ಬಿಟ್ಟು ಬೆದರಿಸುತ್ತಿದ್ದಾರೆ. ಮಂಗಳಮುಖಿಯರಿಂದ ನಿಂಬೆಹಣ್ಣಿನ ಪೂಜೆ ಮಾಡಿಸಿ ಭಯ ಹುಟ್ಟಿಸುತ್ತಿರುವುದಲ್ಲದೇ ಬೇಯಿಸಿದ ಕೋಳಿ ಮಾಂಸ ಮನೆ ಬಾಗಿಲಿಗೆ ಹಾಕಿ ತೊಂದರೆ ಕೊಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ

ಅಂಗಡಿ ಖಾಲಿ ಮಾಡುವಂತೆ ಬೆದರಿಕೆ ಹಾಕಿರುವ ದೃಶ್ಯ ಮತ್ತು ಮಂಗಳಮುಖಿಯರು ಮನೆಯ ಬಳಿ ಬಂದು ಕಿರುಕುಳ ನೀಡಿರುವ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಪೊಲೀಸರಿಗೆ ದೂರು ನೀಡಿದರೂ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸಂತೋಷ್ ಈಗ ಪೊಲೀಸ್ ಕಮಿಷನರ್‍ ಗೆ ದೂರು ನೀಡಲು ಸಂತೋಷ್ ಮುಂದಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

gay tortured ಅಂಗವಿಕಲ ರಿಯಲ್ ಎಸ್ಟೇಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ