ಲಾರಿಯಲ್ಲಿ ಸಾಗಿಸುತ್ತಿದ್ದ ಒಂಟೆಗಳ ವಶ

13 camels captured in truck

20-11-2017

ಬೀದರ್: ಅಕ್ರಮವಾಗಿ ಸಾಗಿಸುತ್ತಿದ್ದ 13 ಒಂಟೆಗಳನ್ನು ಬೀದರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ಒಂಟೆ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬೀದರ್ ನ ಚಿಕ್ಕಪೇಟೆ ಸರ್ಕಲ್ ಬಳಿಯ ನಾಕಾ ಬಂದಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಗುಜರಾತ್ ಮೂಲದಿಂದ ಬೀದರ್ ನ ಸುಲ್ತಾನ್ ಪುರ್ ಅರಣ್ಯ ಪ್ರದೇಶದಲ್ಲಿನ ಕಸಾಯಿ ಖಾನೆಗೆ ಲಾರಿಯಲ್ಲಿ ಒಂಟೆಗಳನ್ನು ಸಾಗಿಸಲಾಗುತ್ತಿದ್ದು, ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂಟೆಗಳನ್ನು ಜಪ್ತಿ ಮಾಡಿ, ಲಾರಿ ಚಾಲಕ ನತ್ತೆಖಾನ್, ಬಕ್ಕಾಜೀ, ದಿನೇಶ್, ಅಮ್ಜಾದ್ ಖಾನ್ ಎಂಬುರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

camel size Bidar ಕಾರ್ಯಾಚರಣೆ ನಾಕಾ ಬಂದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ