ಖೈದಿಗಳ ಭಾರೀ ಪ್ರತಿಭಟನೆ

Massive protest of prisoners

20-11-2017

ಬೆಂಗಳೂರು: ಕೆಲಸ, ಕೂಲಿ ಮತ್ತು ಪೆರೋಲ್ ಕೊಡಿ ಎಂದು ಪರಪ್ಪನ ಅಗ್ರಹಾರದಲ್ಲಿ ,1500 ಜನ ಖೈದಿಗಳು ಪ್ರತಿಭಟನೆ ನಡೆಸಿದ್ದಾರೆ. 15 ತಿಂಗಳಿನಿಂದ ದುಡಿಸಿಕೊಂಡು ಕೂಲಿ ನೀಡಿಲ್ಲ, ಈಗಾಗಲೆ 500  ಜನರಿಗೆ ಕಲಸ ಕೊಟ್ಟಿದ್ದು, ಇನ್ನುಳಿದ 600 ಜನರಿಗೆ ಕೆಲಸವಿಲ್ಲದಂತಾಗಿ ಎಂದು ಖೈದಿಗಳು ಆರೋಪಿಸಿದ್ದಾರೆ. ಸಂಬಳವಿಲ್ಲದೆ ಖಾಲಿ ಕೂತಿರುವ ಜೀವಾವವಧಿ ಖೈದಿಗಳು ಮಕ್ಕಳ ಶಾಲೆಗೆ,ಮನೆಗೆ ಕೊಡಲು ಕೂಲಿ ಹಣವನ್ನೇ ಅವಲಂಬಿತರಾಗಿದ್ದು, ಪ್ರತಿಭಟನೆ ನಡೆಸಿದ್ದಾರೆ. ಸರಿಯಾದ ಸಮಯದಲ್ಲಿ ಪೆರೋಲ್ ನೀಡಿ ಎಂಬ ಬೇಡಿಕೆ ಹಿನ್ನೆಲೆ, ಜೀವಾವಧಿ ಖೈದಿಗಳಿಗೆ ಕೆಲಸ ಕೊಡದೆ ಕೂರಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಸಕ್ಕಾಗಿ ಬೇಡಿಕೆ ಇಟ್ಟ ಜೀವಾವಧಿ ಖೈದಿಗಳು ಭಾರೀ ಪ್ರತಿಭಟನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Parappana Agrahara Central Prison ಖೈದಿಗಳು ಪೆರೋಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ