ಕಾಂಗ್ರೆಸ್ ಶಾಸಕ ಷಡಕ್ಷರಿಗೆ ನೋಟಿಸ್ ಜಾರಿ

Notice issued to congress MLA Shadakshari

20-11-2017

ಬೆಂಗಳೂರು: ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿಗೆ, ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೋಟಿಸ್ ಜಾರಿಮಾಡಿದೆ. ಮಧುಕುಮಾರಿ ಎಂಬುವವರು ಅರ್ಜಿ ಸಲ್ಲಿದಿದ್ದು, ತನ್ನನ್ನು 2ನೇ ಪತ್ನಿ ಎಂದು ಘೋಷಿಸುವಂತೆಯೂ ಮತ್ತು ತನ್ನ ಪುತ್ರನನ್ನು ಜೈವಿಕ ಪುತ್ರ ಎಂದು ಘೋಷಿಸುವಂತೆ ಕೋರಿ ಕೌಟುಂಬಿಕ ‌ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಕುರಿತಂತೆ ವಿಚಾರಣೆ ನಡೆಸಿದ ಕೌಟುಂಬಿಕ ‌ನ್ಯಾಯಾಲಯ, ಶಾಸಕ ಕೆ.ಷಡಕ್ಷರಿಗೆ ನೋಟಿಸ್ ಜಾರಿಗೊಳಿಸಿದೆ. ಈ‌ ಹಿಂದೆ ಮೂರು ಬಾರಿ ನೋಟಿಸ್ ಜಾರಿಗೊಳಿಸಿದ್ದ ಕೋರ್ಟ್, ನೋಟಿಸ್ ಶಾಸಕ ಕೆ.ಷಡಕ್ಷರಿಗೆ ತಲುಪದ ಹಿನ್ನೆಲೆ ಪುನಃ ನೋಟೀಸ್ ಜಾರಿಗೊಳಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ