ಕಚೇರಿಯಲ್ಲಿಯೇ ಕಾವಲುಗಾರ ಆತ್ಮಹತ್ಯೆ !

Watchman Suicide in office

20-11-2017

ಬೀದರ್: ಮಾನಸಿಕ ಖಿನ್ನತೆಯಿಂದ ಕಾವಲುಗಾರರೊಬ್ಬರು ನೇಣಿಗೆ ಶರಣಾಗಿರುವ ಘಟನೆಯು ಬೀದರ್ ನಲ್ಲಿ ನಡೆದಿದೆ. ಬೀದರ್ ನ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಕಾವಲುಗಾರರಾದ, ಧನರಾಜ್(48) ಕಚೇರಿ ಆವರಣದಲ್ಲಿಯೇ ನೇಣಿಗೆ ಶರಣಾಗಿದ್ದಾರೆ. 6 ತಿಂಗಳ ಹಿಂದಷ್ಟೇ ಧನರಾಜ್ ಪತ್ನಿ ಮೃತಪಟ್ಟಿದರು. ಪತ್ನಿ ಸಾವಿನ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಧನರಾಜ್, ಇಂದು ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಸ್ಥಳಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ