ದೇವಸ್ಥಾನದ ವಿಗ್ರಹ ಭಗ್ನಗೊಳಿಸಿ ವಿಕೃತಿ..!

Temple idols destruction

20-11-2017 254

ತುಮಕೂರು: ಶಿವಲಿಂಗ ಹಾಗೂ ಬಸವಣ್ಣ ಮೂರ್ತಿಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆಯು, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ. ತಾಲ್ಲೂಕಿನ ಹಂದನಕೆರೆಯಲ್ಲಿನ ರಾಜಣ್ಣ ಎಂಬುವರ ಜಮೀನಿನಲ್ಲಿದ್ದ ದೇವಸ್ಥಾನಗಳ ಮೇಲೆ ಕಿಡಿಗೇಡಿಗಳು ದಾಳಿ ಮಾಡಿ, ಮೂರ್ತಿಗಳನ್ನು ಛಿದ್ರಗೊಳಿಸಿದ್ದಾರೆ. ಘಟನೆಯಲ್ಲಿ ಶಿವಲಿಂಗ, ಬಸವಣ್ಣನ ವಿಗ್ರಹದ ಕಾಲು ಮುರಿದಿರುವ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಇದೇ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ, ಡಾ.ವೀರೇಂದ್ರ ಹೆಗ್ಗಡೆ ಹಣ ನೀಡಿದ್ದು, ಜೀರ್ಣೋದ್ಧಾರ ಕಾರ್ಯವೂ ನಡೆದಿತ್ತು. ಆದರೆ ಜೀರ್ಣೋದ್ಧಾರದ ನಡುವೆ ವಿಗ್ರಹಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದು ಆತಂಕ ಸೃಷ್ಟಿಸಿದ್ದಾರೆ. ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.ಸಂಬಂಧಿತ ಟ್ಯಾಗ್ಗಳು

Temples Tumkur ಜೀರ್ಣೋದ್ಧಾರ ಕಿಡಿಗೇಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ