ಒಂದು ತಿಂಗಳ ತಲಕಾವೇರಿ ಅನ್ನದಾನಕ್ಕೆ ತೆರೆ…

Talakaveri free meal fest ended

20-11-2017

ಮಡಿಕೇರಿ: ಪ್ರತಿ ವರ್ಷ ಕೊಡಗು ಏಕೀಕರಣ ರಂಗದ ಮುಂದಾಳತ್ವದಲ್ಲಿ, ದಾನಿಗಳ ಸಹಕಾರದಿಂದ ನಡೆಯುವ ತಲಕಾವೇರಿಯಲ್ಲಿ ಭಕ್ತರಿಗೆ ನೀಡುವ ಅನ್ನದಾನವು ಈ ವರ್ಷವೂ ಯಾವುದೇ ಅಡೆ, ತಡೆಗಳಿಲ್ಲದೆ ನಿರಾಂತಕವಾಗಿ ಒಂದು ತಿಂಗಳ ಕಾಲ ನಡೆಯಿತು.

ಕಾವೇರಿ ಸಂಕ್ರಮಣದಿಂದ ತೊಡಗುವ ಅನ್ನದಾನವು ತಲಕಾವೇರಿಗೆ ಆಗಮಿಸುವ ಭಕ್ತರಿಗೆ ಬೆಳಗಿನ ಉಪಹಾರ ,ಮದ್ಯಾಹ್ನದ ಊಟ ,ಸಂಜೆಯ ಊಟ ಹಾಗು ಕಾಪಿ ತಿಂಡಿಗಳನ್ನು ಕೆಲವೊಂದು ದಿವಸ ನೀಡಲಾಗುತಿತ್ತು. ಒಂದು ತಿಂಗಳ ಕಾಲ ಸಹಸ್ರಾರು ಮಂದಿ ಭಕ್ತರ ಹಸಿವನ್ನು ನೀಗಿಸಿದ ಅನ್ನದಾನ ಸಮಿತಿಯವರು ಅವರೆಲ್ಲರ ಮೆಚ್ಚುಗೆಗೆ ಪಾತ್ರರಾದರು. ದೂರದಿಂದ ಆಗಮಿಸಿದ ಹಲವು ಭಕ್ತರು ಅನ್ನದಾನಕ್ಕೆ ತಮ್ಮ ಸಹಕಾರವಿರಲಿ ಎಂದು ತಮ್ಮ ಕಿರುಕಾಣಿಕೆಯನ್ನು ಅನ್ನದಾನ ಸಮಿತಿಯವರ ಕಚೇರಿಗೆ ಆಗಮಿಸಿ ನೀಡುತಿದ್ದಿದು ವಿಶೇಷವಾಗಿತ್ತು.

ನಮ್ಮ ಜಿಲ್ಲೆಯ ಭಕ್ತರು ಅಲ್ಲದೆ, ದೂರದ ತಮಿಳುನಾಡಿನಿಂದ, ಮಂಡ್ಯ, ಮೈಸೂರು, ಬೆಂಗಳೂರು, ಮುಂತಾದ ಕಡೆಗಳಿಂದ ಅಕ್ಕಿ ,ಹಾಗು ತರಕಾರಿಯ ರೂಪದಲ್ಲಿ ಭಕ್ತರು ಅನ್ನದಾನಕ್ಕೆ ಕಾಣಿಕೆಯನ್ನು ನೀಡುತಿದ್ದಿದು ಕಂಡು ಬಂತು. ಒಟ್ಟಿನಲ್ಲಿ ಅನ್ನದಾನವು ಭಕ್ತರ ಪ್ರಶಂಶೆಗೆ ಪಾತ್ರವಾಗಿ ಕೊಡಗು ಏಕೀಕರಣ ರಂಗ ಹಾಗು ಅದರ ಜೊತೆ ಕೈಜೋಡಿಸಿದ ಕೊಡಗಿನ ಹಲವು ಸಂಘಟನೆಗಳು ಮೆಚ್ಚುಗೆಗೆ ಪಾತ್ರವಾದವು.  

ವರದಿ: ಪಪ್ಪು ತಿಮ್ಮಯ

.


ಸಂಬಂಧಿತ ಟ್ಯಾಗ್ಗಳು

Talakaveri Madikeri ಸಂಕ್ರಮಣ ಸಹಸ್ರಾರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ