ವರದಕ್ಷಿಣೆ ಕಿರುಕುಳ ಮಹಿಳೆ ಆತ್ಮಹತ್ಯೆ..?

Dowry harassment: women committed suicide

20-11-2017

ಚಿತ್ರದುರ್ಗ: ವರದಕ್ಷಿಣೆ ಕಿರುಕುಳ ಹಾಗು ಕೌಟಂಬಿಕ ಕಲಹದ ಹಿನ್ನೆಲೆ, ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ದಾರುಣ ಘಟನೆಯು ಚಿತ್ರದುರ್ಗದಲ್ಲಿ ನಡೆದಿದೆ. ಆಶಾ(23) ಮೃತ ದುರ್ದೈವಿ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಆರು ತಿಂಗಳ ಹಿಂದಷ್ಟೇ ನಾಗರಾಜು ಎಂಬುವರೊಂದಿಗೆ ಆಶಾ ಅವರ ವಿವಾಹವಾಗಿತ್ತು. ಇನ್ನು ಈ ಕುರಿತಂತೆ, ಗಂಡ ನಾಗರಾಜು, ಮಾವ ತಿಪ್ಪೇಸ್ವಾಮಿ, ಅತ್ತೆ ಭಾಗ್ಯಮ್ಮ ಕೊಲೆಗೈದಿದ್ದಾರೆಂದು, ಮೃತ ಆಶಾ ಸಹೋದರ ಆರೋಪಿಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Hang suicide Chitradurga ವರದಕ್ಷಿಣೆ ಚಳ್ಳಕೆರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ