ಇಕ್ಕಟ್ಟಿನಲ್ಲಿ ಶಾಸಕ ಚೆಲುವರಾಯಸ್ವಾಮಿ...!

Case filed against MLA Cheluvarayaswamy

20-11-2017

ಮಂಡ್ಯ: ಜೆಡಿಎಸ್ ನಿಂದ ಅಮಾನತುಗೊಂಡಿರುವ ನಾಗಮಂಗಲದ ಜೆಡಿಎಸ್ ಶಾಸಕ, ಚಲುವರಾಯಸ್ವಾಮಿಗೆ ಸಂಕಷ್ಟ ಶುರುವಾಗಿದೆ. ತಮ್ಮ ಪ್ರಭಾವ ಬಳಸಿ ಐವರು ವ್ಯಕ್ತಿಗಳಿಗೆ ಅಂಗವಿಕಲ ಪ್ರಮಾಣ ಪತ್ರ ಕೊಡಿಸಿರುವ ಬಗ್ಗೆ ಲೋಕಾಯುಕ್ತಕ್ಕೆ ಆರ್.ಟಿ.ಐ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ. ನಕಲಿ ಪ್ರಮಾಣ ಪತ್ರ ಪಡೆದವರು ಈಗ ಗ್ರಾಮ ಲೆಕ್ಕಿಗರಾಗಿದ್ದು, ಪ್ರಮಾಣ ಪತ್ರಕ್ಕೆ ಸಹಕರಿಸಿದ ಆರೋಪದಡಿ ಅಂದಿನ ಡಿಸಿ, ಎಸಿ, ಮತ್ತು ತಹಸೀಲ್ದಾರರ ವಿರುದ್ಧವೂ ದೂರು ಸಲ್ಲಿಸಿದ್ದಾರೆ.

ಆರ್.ಟಿ.ಐ ಕಾರ್ಯಕರ್ತರಾದ ಕೇಶವಮೂರ್ತಿ ಲೋಕಾಯುಕ್ತಕ್ಕೆ ದೂರು ನೀಡದ್ದಾರೆ. ರಘು, ಗಣೇಶ್, ಅರ್ಚನಾ, ರೀನಾ, ಪ್ರಿಯಾ, ಮತ್ತು ಪ್ರದೀಪ್ ಕುಮಾರ್ ಎಂಬುವರು, ಅಂಗವಿಲಕ ಅಭ್ಯರ್ಥಿ ಪ್ರಮಾಣ ಪತ್ರ ಪಡೆದು, ಸರ್ಕಾರಿ ನೌಕರಿ ಗ್ರಾಮಲೆಕ್ಕಿಗರಾಗಿ ಆಯ್ಕೆಯಾಗಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳು ಮತ್ತು ಶಾಸಕರ ವಿರುದ್ಧ ಕ್ರಮ ಜರುಗಿಸುವಂತೆ ಆರ್.ಟಿ.ಐ ಕಾರ್ಯಕರ್ತ ಕೇಶವಮೂರ್ತಿ ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

N. Cheluvaraya Swamy Lokayukta ಜೆಡಿಎಸ್ ಆರ್.ಟಿ.ಐ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ