ಸರಗಳ್ಳತನಕ್ಕೆ ಕಾರಲ್ಲಿ ಬಂದ ಕಳ್ಳರು

Chain snatch in Mandya

20-11-2017

ಮಂಡ್ಯ: ಮಂಡ್ಯದಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರಿದ್ದಾರೆ. ರಸ್ತೆಯಲ್ಲಿ ಒಂಟಿಯಾಗಿ ತೆರಳುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಗ್ರಾಮದ, ಬೆಂಗಳೂರು-ಮೈಸೂರು ಹೆದ್ದಾರಿ ಬಳಿಯಯಲ್ಲಿ ಘಟನೆ ನಡೆದಿದೆ. ಗೌರಮ್ಮ ಸರ ಕಳೆದುಕೊಂಡ ಮಹಿಳೆ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಹೋಟೆಲ್ ಕೆಲಸಕ್ಕೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಸರಗಳ್ಳರು, ಮಹಿಳೆಯನ್ನು ತಳ್ಳಿ, ನೆಲಕ್ಕೆ ಬೀಳಿಸಿ, ಕತ್ತಿನಲ್ಲಿದ್ದ 43ಗ್ರಾಂ.ತೂಕದ ಸರ ಕಸಿದು ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ. ಮಹಿಳೆ ನೀಡಿರುವ ಮಾಹಿತಿಯನ್ನಾಧರಿಸಿ, ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರಿಗಾಗಿ ಶೋಧಕಾರ್ಯ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ