ಸ್ವಾಭಿಮಾನ ಸಮಾವೇಶ ರದ್ದು

20-11-2017
ತುಮಕೂರು: ಉಚ್ಛಾಟಿತ ಜೆಡಿಎಸ್ ಮುಖಂಡ ರಮೇಶ್ ಗೌಡ ನೇತೃತ್ವದಲ್ಲಿ ನಡೆಯಬೇಕಿದ್ದ ಸ್ವಾಭಿಮಾನ ಸಮಾವೇಶವನ್ನು ರದ್ದುಪಡಿಸಲಾಗಿದೆ. ತುಮಕೂರಿನ ತುರುವೇಕೆಯಲ್ಲಿ ಇಂದು, ನಡೆಯಬೇಕಿದ್ದ ಸಮಾವೇಶವನ್ನು ಜಿಲ್ಲಾಧಿಕಾರಿ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಸಮಾವೇಶದ ವೇಳೆ ಗಲಾಟೆ-ದೊಂಬಿ ನಡೆಯುವ ಸಾಧ್ಯತೆಗಳಿದ್ದು, ಕಾರ್ಯಕ್ರಮ ರದ್ದುಪಡಿಸಿ ಡಿಸಿ ಕೆಪಿ ಮೋಹನ್ ರಾಜ್ ಆದೇಶಿಸಿದ್ದಾರೆ. ಇಂದು ಯಾವುದೇ ಸಾರ್ವಜನಿಕ ಸಮಾರಂಭ ನಡೆಯದಂತೆ ಸೂಚಿಸಿದ್ದಾರೆ. ಇನ್ನು ಮೂಲಗಳ ಪ್ರಕಾರ ಉಚ್ಛಾಟಿತ ಜೆಡಿಎಸ್ ಮುಖಂಡ ರಮೇಶ್ ಗೌಡ ಹಾಗೂ ಶಾಸಕರಾದ ಎಂ.ಟಿ ಕೃಷ್ಣಪ್ಪ ಅವರ ರಾಜಕೀಯ ಕಾರಣಗಳಿಗಾಗಿ ಅಹಿತಕರ ಘಟನೆ ನಡೆಯುವ ಸಾಧ್ಯತೆಗಳಿದ್ದು, ಮಾಹಿತಿ ಆಧರಸಿ ಕಾರ್ಯಕ್ರಮ ರದ್ದು ಪಡಿಸಿರುವುದಾಗಿ ತಿಳಿದು ಬಂದಿದೆ.
ಒಂದು ಕಮೆಂಟನ್ನು ಹಾಕಿ