ಮಗಳಿಗೆ ನೇಣು: ಕೈಕೊಯ್ದುಕೊಂಡ ತಾಯಿ

Hang death mother-daughter

18-11-2017

ಬೆಂಗಳೂರು: ಕೋಣನಕುಂಟೆಯ ಚುಂಚಘಟ್ಟದಲ್ಲಿ ನಿನ್ನೆ ರಾತ್ರಿ ಕೌಟುಂಬಿಕ ಕಲಹದ ಹಿನ್ನೆಲೆ, ಮಗಳನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿದ ತಾಯಿ, ಕೈಕೊಯ್ದು ಕೊಂಡು ನಂತರ ತಾನೂ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಚುಂಚಘಟ್ಟದ ಪಾನೀಪೂರಿ ವ್ಯಾಪಾರಿ ಸಂಜಯ್ ಅವರನ್ನು 2ನೇ ವಿವಾಹವಾಗಿದ್ದ ಶೀಲಾ (26) ರಾತ್ರಿ 11ರ ವೇಳೆ ಮಗಳು ಅಂಶಿಕಾ(4)ಳಿಗೆ ಕುತ್ತಿಗೆ ಬಿಗಿದು ಕೊಲೆ ಮಾಡಿ, ತಾನೂ ಕೈಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಫಲಿಸದೆ ಕೊನೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಶೀಲಾ, ಮೊದಲ ಪತಿ ಮೃತಪಟ್ಟ ನಂತರ 8 ತಿಂಗಳ ಹಿಂದೆ ಸಂಜಯ್‍ನನ್ನು ವಿವಾಹವಾಗಿದ್ದು, ಎರಡು ತಿಂಗಳು ನಗರದಲ್ಲಿದ್ದು, ತಮ್ಮ ಊರಿಗೆ ತೆರಳಿದ್ದರು. ಸಂಜಯ್‍ಗೆ ಕೂಡ ಇದು 2ನೇ ಮದುವೆಯಾಗಿದೆ. ಮೊದಲ ಪತಿಯ ಮಗಳು ಅಂಶಿಕಾ ಜೊತೆ ಶೀಲಾ, 4 ದಿನಗಳ ಹಿಂದಷ್ಟೆ ನಗರಕ್ಕೆ ಬಂದಿದ್ದರು.

ಅಲ್ಲಿಂದ ಸಂಜಯ್ ಜೊತೆಗೆ ವಾಸವಿದ್ದರು, ರಾತ್ರಿ ಪತಿ ವ್ಯಾಪಾರಕ್ಕೆ ಹೋದ ನಂತರ ಶೀಲಾ ರಾತ್ರಿ ಈ ಕೃತ್ಯ ನಡೆಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಕೋಣನಕುಂಟೆ ಪೊಲೀಸರು ಶಂಕಿಸಿದ್ದಾರೆ. ಘಟನೆಯ ಕುರಿತು ಸಂಜಯ್‍ನನ್ನು ವಿಚಾರಣೆಗೊಳಪಡಿಸಲಾಗಿದ್ದು, ಆತ ಅಸ್ಪಷ್ಟ ಹೇಳಿಕೆಗಳನ್ನು ನೀಡುತ್ತಿದ್ದು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ