ಪೇದೆಯನ್ನು ಹೊಡೆದವನು ಕಂಬಿ ಹಿಂದೆ..!

A man hits Traffic police

18-11-2017

ಬೆಂಗಳೂರು: ಕಾರಿನಲ್ಲಿ ಏಕ ಮುಖ ರಸ್ತೆಯ ವಿರುದ್ಧ (ಒನ್ ವೇ)ದಿಕ್ಕಿನಲ್ಲಿ  ಮೊಬೈಲ್‍ನಲ್ಲಿ ಮಾತಾಡಿಕೊಂಡು ಹೋಗುತ್ತಿದ್ದನ್ನು ಪ್ರಶ್ನಿಸಿದ ಸಂಚಾರ ಪೊಲೀಸ್ ಪೇದೆ ಮೇಲೆ ಕಾರು ಚಾಲಕ ಬೇಸ್ ಬಾಲ್ ಬ್ಯಾಟ್ ನಿಂದ ಹಲ್ಲೆ ಮಾಡಿರುವ ಘಟನೆ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಎಚ್‍ಎಸ್‍ಅರ್ ಲೇಔಟ್ ಸಂಚಾರ ಪೇದೆ ಭೀಮಶಂಕರ್ ಅವರ ಮೇಲೆ ಹಲ್ಲೆ ಮಾಡಿದ ಆರೋಪಿ ದಿಲೀಪ್‍ ನನ್ನು ಬಂಧಿಸಲಾಗಿದೆ. ಕಳೆದ ಗುರುವಾರ ಬೆಳಿಗ್ಗೆ 10.30ಕ್ಕೆ ನಡೆದಿರುವ ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ದಿಲೀಪ್ ಸರ್ಜಾಪುರದ ಒನ್ ವೇ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಮೊಬೈಲ್‍ನಲ್ಲಿ ಮಾತನಾಡಿಕೊಂಡು ಬರುತ್ತಿದ್ದಾಗ, ಕರ್ತವ್ಯದಲ್ಲಿದ್ದ ಪೇದೆ ಭೀಮಶಂಕರ್ ತಡೆದು ದಂಡ ವಿಧಿಸಲು ಹಿರಿಯ ಅಧಿಕಾರಿಗಳ ಬಳಿ ಬರುವಂತೆ ಕರೆದಿದ್ದಾರೆ, ಇದರಿಂದ ಆಕ್ರೋಶಗೊಂಡ ದಿಲೀಪ್ ಕಾರಿನಲ್ಲಿದ್ದ ಬೇಸ್‍ಬಾಲ್ ಬ್ಯಾಟ್ ತಂದು ``ನನಗೆ ಫೈನ್ ಹಾಕ್ತೀಯಾ'' ಎಂದು ಹೊಡೆದಿದ್ದಾನೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿ ಜೈಲಿಗೆ ಕಳುಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Police Constable Sarjapur ಪೊಲೀಸ್ ಪೇದೆ ಆರೋಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ