ಗ್ರಾಮವಾಸ್ತವ್ಯಕ್ಕೆ ಮುಂದಾದ ಹೆಬ್ಬಾಳ್ಕರ್

Hebbalkar Gramavastavya

18-11-2017

ಚಿಕ್ಕಮಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಪಕ್ಷ ಸಂಘಟನೆಗೆ, ಕೆಪಿಸಿಸಿ ಮಹಿಳಾ ಘಟಕ ಗ್ರಾಮವಾಸ್ತವ್ಯಕ್ಕೆ ಮುಂದಾಗಿದೆ. ಕೆಪಿಸಿಸಿ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ರಾಜ್ಯದ 24 ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಮುಂದಾಗಿದ್ದು, ಮೊದಲ ದಿನವಾದ ಇಂದು ಚಿಕ್ಕಮಗಳೂರಿನ ಕಲ್ಕೆರೆ ಗೊಲ್ಲರಹಟ್ಟಿಯಲ್ಲಿ ಗ್ರಾಮವಾಸ್ತವ್ಯ ಹೂಡಲಿದ್ದಾರೆ. ಕೆಲವು ದಿನಗಳ ಕೆಪಿಸಿಸಿಯಲ್ಲಿ ಸರಣಿ ಸಭೆಗಳನ್ನು ನಡೆಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಟಿಕೇಟ್ ಆಕಾಂಕ್ಷಿಗಳು ಗ್ರಾಮವಾಸ್ತವ್ಯ ಮಾಡಬೇಕು, ವಿಧವಾ ಮನೆಯಲ್ಲಿ ಗ್ರಾಮವಾಸ್ತವ್ಯ ನಡೆಸಿ, ಇಂದಿರಾಗಾಂಧಿಯವರು ನೀಡಿದ ಕಾರ್ಯಕ್ರಮಗಳನ್ನು ಮಹಿಳಾ ಮತದಾರರಿಗೆ ಮುಟ್ಟಿಸಬೇಕು. ಪಕ್ಷವನ್ನು ಸಂಘಟಿಸಿ ಸಮರ್ಥರಾದ ಅಭ್ಯರ್ಥಿಗಳಿಗೆ ಟಿಕೇಟ್ ನೀಡೋದಾಗಿ ಹೇಳಿದ್ದರು. ಕೆ.ಸಿ.ವೇಣುಗೋಪಾಲ್ ಸೂಚನೆ ಹಿನ್ನೆಲೆ ಮಹಿಳಾ ಘಟಕ ಗ್ರಾಮವಾಸ್ತವ್ಯಕ್ಕೆ ಮುಂದಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Ananth kumar Hegade. Yak Raajinaame kodabeku reason heli
  • Pramod
  • Msw student