ಮಂತ್ರಿ ಮಾಲ್ ಗೆ ನೋಟಿಸ್..!

Notice issued to mantri mall

18-11-2017

ಬೆಂಗಳೂರು: ಮಂತ್ರಿಮಾಲ್ ನಲ್ಲಿ ಕನ್ನಡ ನಾಮಫಲಕಗಳ ಅಳವಡಿಕೆಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ಹಿನ್ನೆಲೆ, ನಿಯಮ ಪಾಲಿಸುವಂತೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದ್ದು, ಒಂದು ತಿಂಗಳೊಳಗೆ ಕನ್ನಡ ನಾಮಫಲಕ ಅಳವಡಿಕೆಗೆ ಮಾಲ್ ಸಮ್ಮತಿದೆ. ಶೇಕಡಾ 60 ರಷ್ಟು ಕನ್ನಡದಲ್ಲಿರೋ ನಾಮಫಲಕ ಬಳಕೆಗೆ ಸೂಚನೆ ನೀಡಲಾಗಿದ್ದು, ಈಗಾಗಲೇ ಹೊರಭಾಗದಲ್ಲಿ  ಕನ್ನಡ ನಾಮಫಲಕ ಅಳವಡಿಸಿರುವ ಮಾಲ್, ಒಳಭಾಗದಲ್ಲೂ ಮಳಿಗೆಗಳ ಹೆಸರು ಕನ್ನಡೀಕರಣ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇನ್ನು ಈ ಸಂಬಂಧ ಮಾಲ್ ನ ಮುಖ್ಯಸ್ಥರು ಒಂದು ತಿಂಗಳ ಸಮಯಾವಕಾಶ ಕೇಳಿದ್ದಾರೆ. ಇಡೀ ನಗರಕ್ಕೆ ಮಂತ್ರಿ ಮಾಲ್ ರೋಲ್ ಮಾಡೆಲ್ ಆಗಲಿದೆ, ಮಂತ್ರಿ ಮಾಲ್ ನಿಂದ ಆರಂಭಿಸಿ ಪ್ರತೀ ಮಾಲ್ ಗೂ ಕನ್ನಡ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದು, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ