ಅಮಾವಾಸ್ಯೆ ಎಂದು ಸಭೆ ಮುಂದೂಡಿಕೆ..!

Zilla Panchayath meeting postponed

18-11-2017

ವಿಜಯಪುರ: ಛಟ್ಟಿ ಅಮವಾಸ್ಯೆ ಹಿನ್ನೆಲೆ, ಇಂದು ನಡೆಯಬೇಕಿದ್ದ ವಿಜಯಪುರ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯನ್ನು ಮುಂದೂಡಿದ್ದಾರೆ. ಮಾಢ್ಯಕ್ಕೆ ಶರಣಾದ ವಿಜಯಪುರ ಜಿಲ್ಲಾ ಪಂಚಾಯತಿಯು, ಸಾಮಾನ್ಯ ಸಭೆಯನ್ನು ನವೆಂಬರ್ 28ಕ್ಕೆ ಮುಂದೂಡಿದೆ. ಛಟ್ಟಿ ಅಮವಾಸ್ಯೆಗೆ ಎಲ್ಲ ಸದಸ್ಯರೂ ದೇವಸ್ಥಾನಗಳಿಗೆ ಹೋಗಬೇಕು ಎಂಬ ಒತ್ತಡದ ಮೇರೆಗೆ ಸಭೆಯನ್ನು ಮುಂದೂಡಿರುವುದಾಗಿ ಅಧ್ಯಕ್ಷರು ಹೇಳಿದ್ದಾರೆ. ಆದರೆ ಅಮಾವಾಸ್ಯೆ ಹಿನ್ನೆಲೆ ಸಭೆಯನ್ನು ಮುಂದೂಡಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿವೆ. ಮೌಢ್ಯ ನಿಷೇಧ ಕಾಯ್ದೆ ಅಂಗೀಕಾರವಾದರೂ ಮೌಢ್ಯ ಮಾತ್ರ ಇನ್ನೂ ನಿಂತಿಲ್ಲ.


ಸಂಬಂಧಿತ ಟ್ಯಾಗ್ಗಳು

Zilla Panchayath Vijayapura ಮೌಢ್ಯ ನಿಷೇಧ ವಿಜಯಪುರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ