ನೌಕಾನೆಲೆ ವೀಕ್ಷಣೆಗೆ ಶಾಸಕರ ದಂಡು..!

MLA

18-11-2017

ಕಾರವಾರ: ಉತ್ತರ ಕನ್ನಡ ಜಿಲ್ಲೆಯ, ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆ ವೀಕ್ಷಣೆಗೆ ಶಾಸಕರ ತಂಡ ಆಗಮಿಸಿದೆ. ನೂರಕ್ಕೂ ಹೆಚ್ಚು ಶಾಸಕರು ಬೆಳಗಾವಿಯ ಅಧಿವೇಶನದಿಂದ ಕಾರವಾರದ  ಕದಂಬ ನೌಕಾನೆಲೆಯ ವೀಕ್ಷಣೆಗೆ ಬಂದಿದ್ದಾರೆ. ಬೆಳಗಾವಿ-ಹುಬ್ಬಳ್ಳಿ-ಯಲ್ಲಾಪುರ ರಸ್ತೆ ಮಾರ್ಗವಾಗಿ ಕಾರವಾರಕ್ಕೆ ಆಗಮಿಸಿದ್ದು, ನೌಕಾನೆಲೆ ಸಿಬ್ಬಂದಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಗಿ ಭದ್ರತೆ ನಡುವೆ ನೌಕಾನೆಲೆ ವೀಕ್ಷಣೆಗೆ ಅವಕಾಶ ಮಾಡಲಾಗಿದ್ದು, ಶಾಸಕರ ನೌಕಾನೆಲೆ ವೀಕ್ಷಣೆ ವೇಳೆ ಮಾಧ್ಯಮಗಳ ಚಿತ್ರೀಕರಣಕ್ಕೆ ನೌಕಾನೆಲೆ ಅಧಿಕಾರಿಗಳು ನಿಷೇಧ ಹೇರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Karwar Uttara Kannada ನೌಕಾನೆಲೆ  ಬಿಗಿ ಭದ್ರತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ