ಬಡವರ ಅಕ್ಕಿ ಕಳ್ಳರಪಾಲು..!

Society rice illegal sale

18-11-2017

ಮಂಡ್ಯ: ಮಂಡ್ಯದ ಮದ್ದೂರಿನಲ್ಲಿ ಬಡವರ ಅಕ್ಕಿ ಕಳ್ಳರಪಾಲಾಗುತ್ತಿರುವುದು ಬೆಳಕಿಗೆ ಬಂದಿದೆ. ಪಟ್ಟಣದ ಮಹಿಳಾ ವಿವಿಧೋದ್ದೇಶ ಸೊಸೈಟಿಯಲ್ಲಿ ಅಕ್ಕಿ ಮತ್ತು ಇತರ ಸಾಮಗ್ರಿಗಳು ಅನ್ಯರ ಪಾಲಾಗುತ್ತಿದ್ದು, ಬಡವರಿಗೆ ನೀಡಬೇಕಾದ ಅಕ್ಕಿಯನ್ನು ಅಲ್ಲಿನ ಸಿಬ್ಬಂದಿಯೇ, ಕಳ್ಳ ದಾರಿ ಹಿಡಿದು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇಂದು ಮುಂಜಾನೆಯೇ ಆಟೋ ಒಂದರಲ್ಲಿ ಅಕ್ಕಿ ಮೂಟೆಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ವೇಳೆ, ವಿಡಿಯೋ ಚಿತ್ರೀಕರಿಸಲಾಗಿದ್ದು, ಅಕ್ಕಿ ಸೇರಿದಂತೆ ಇತರೆ ಆಹಾರ ಸಾಮಾಗ್ರಿಗಳು ಸಾಕ್ಷಿಸಮೇತ ಸಿಕ್ಕಂತಾಗಿದೆ. ಬಡವರಿಗೆ ನೀಡಬೇಕಾದ ಅಕ್ಕಿ ಮೂಟೆಗಳು, 10 ಬೇಳೆ ಪ್ಯಾಕೆಟ್ ಸಾಗಾಣಿಕೆ ಮಾಡುತ್ತಿದ್ದರು. ಇವೆಲ್ಲವೂ ಪಡಿತರ ಚೀಟಿದಾರರಿಗೆ ವಿತರಣೆ ಮಾಡಬೇಕಾದ ಆಹಾರ ಸಾಮಾಗ್ರಿಗಳಾಗಿವೆ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ration Mandya ಸೊಸೈಟಿ ವಿವಿಧೋದ್ದೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ