ಜೆನೆರಿಕ್ ಔಷಧ ಮಳಿಗೆಯಲ್ಲಿ ಡ್ರಗ್ಸ್..!

Drugs in the Generic Store

18-11-2017

ದೊಡ್ಡಬಳ್ಳಾಪುರ: ಜೆನೆರಿಕ್ ಔಷಧಿ ಮಳಿಗೆಯಲ್ಲಿ ಕಾನೂನು ಬಾಹಿರವಾಗಿ ಟ್ರೇಡ್ ಡ್ರಗ್ಸ್, ಕಾಸ್ಮಟಿಕ್ಸ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಜೆನೆರಿಕ್ ಮಳಿಗೆಗೆ, ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಅವರ ನೇತೃತ್ವದಲ್ಲಿ, ಧಿಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಹಾಗು ಇನ್ನಿತರ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಜೆನೆರಿಕ್ ಔಷಧಿ ಮಳಿಗೆಯು ಲೋಕೇಶ್ ಎಂಬುವರಿಗೆ ಸೇರಿರುವುದಾಗಿ ತಿಳಿದು ಬಂದಿದೆ.

ದಾಳಿ ಸಂದರ್ಭದಲ್ಲಿ 140ಕ್ಕೂ ಹೆಚ್ಚು ಜೆನೆರಿಕ್ ಪಟ್ಟಿಯಲ್ಲಿ ಇಲ್ಲದ ಔಷಧಿಗಳ ಮಾರಾಟ ಪತ್ತೆಯಾಗಿದೆ. ಇದಲ್ಲದೇ ಗ್ರಾಹಕರಿಗೆ ಬಿಲ್ಲು ಕೊಡದೆ ಮಾರಾಟ ಮಾಡುತ್ತಿದ್ದು, ಎಮ್.ಆರ್.ಪಿ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಔಷಧಿಗಳ ಮಾರಾಟ ಮಾಡಿ ವಂಚಿಸುತ್ತಿರುವುದು ಕಂಡುಬಂದಿದೆ. ಇಷ್ಟೆಲ್ಲಾ ಅವ್ಯವಹಾಹ ನಡೆಸುತ್ತಿದ್ದ, ಜೆನೆರಿಕ್ ಮಳಿಗೆ ಮಾಲೀಕನಿಗೆ ನೋಟಿಸ್ ಕೊಟ್ಟ ಆರೋಗ್ಯಾಧಿಕಾರಿಗಳು, ಕಾನೂನು ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Generic Drugs ದೊಡ್ಡಬಳ್ಳಾಪುರ ಜೆನರಿಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ