ಕೇವಲ 1 ಗಂಟೆಯಲ್ಲಿ ಕಳ್ಳನ ಬಂಧನ !

Thief arrested in just 1 hour

17-11-2017

ಬೆಂಗಳೂರು: ಜಯನಗರ 4ನೇ ಟಿ.ಬ್ಲಾಕ್‍ ನಲ್ಲಿ ನಿನ್ನೆ ರಾತ್ರಿ ಡ್ರ್ಯಾಗರ್ ತೋರಿಸಿ, ಬೆದರಿಸಿ ಲ್ಯಾಪ್‍ಟಾಪ್ ಹಾಗೂ ಎರಡು ಮೊಬೈಲ್‍ಗಳನ್ನು ದೋಚಿ ಪರಾರಿಯಾಗಿದ್ದ ಸುಲಿಗೆಕೋರನನ್ನು ಕೃತ್ಯ ನಡೆದ ಕೇವಲ 1 ಗಂಟೆಯೊಳಗೆ ಬಂಧಿಸುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕದಿರೇನಹಳ್ಳಿ ಕ್ರಾಸ್‍ನ ಭವಾನಿನಗರದ ಪ್ರದೀಪ(22) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಸುಲಿಗೆ ಮಾಡಿದ್ದ ಲ್ಯಾಪ್‍ಟಾಪ್ ಹಾಗೂ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.

ಜಯನಗರ 4ನೇ ಟಿ.ಬ್ಲಾಕ್, 46ನೇ ಕ್ರಾಸ್, 18ನೇ ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಡ್ರ್ಯಾಗರ್ ತೋರಿಸಿ, ಬೆದರಿಸಿ ಲ್ಯಾಪ್‍ಟಾಪ್ ಮತ್ತು ಎರಡು ಮೊಬೈಲ್‍ಗಳನ್ನು ಆರೋಪಿ ಸೇರಿ ನಾಲ್ವರು ಸುಲಿಗೆಕೋರರು ಕಸಿದು ಪರಾರಿಯಾಗಿರುವ ಕರೆ ಬಂದ ತಕ್ಷಣ ಜಯನಗರ ಠಾಣೆ ಎ.ಎಸ್.ಐ ಸತ್ಯಮೂರ್ತಿ ಮತ್ತವರ ಸಿಬ್ಬಂದಿ 5 ನಿಮಿಷಗಳಲ್ಲಿ ಕೃತ್ಯ ನಡೆದ ಸ್ಥಳಕ್ಕೆ ತಲುಪಿ 2 ಹೊಯ್ಸಳ ವಾಹನ  ಮತ್ತು ಚೀತಾ ವಾಹನಗಳಲ್ಲಿ ಬೆನ್ನಟ್ಟಿ ಆರೋಪಿ ಪ್ರದೀಪ್‍ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.

ತಲೆಮರೆಸಿಕೊಂಡಿರುವ ಇನ್ನೂ ಮೂವರಿಗೆ ತೀವ್ರ ಶೋಧ ನಡೆಸಲಾಗಿದ್ದು, ಆರೋಪಿಗಳ ಪತ್ತೆ ಹಚ್ಚಿದ ತಂಡವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ.

 

 

 

 


ಸಂಬಂಧಿತ ಟ್ಯಾಗ್ಗಳು

Thief Arrest ಲ್ಯಾಪ್‍ಟಾಪ್ ಜಯನಗರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ