ಗಾಂಜಾ ಮಾರುತ್ತಿದ್ದ ಮೂವರ ಅರೆಸ್ಟ್

Ganja:Three Arrest

17-11-2017

ಬೆಂಗಳೂರು: ಉಪ್ಪಾರಪೇಟೆ ಶೇಷಾದ್ರಿ ರಸ್ತೆಯ, ಸುಪ್ರಭಾತ ಹೋಟೇಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 1 ಕೆ.ಜಿ 120 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗಲಕೋಟೆಯ ಸಿದ್ದಲಿಂಗಪ್ಪ ಸಿದ್ರಾಮಪ್ಪ ಬೊಳಲದು(30)ರಾಮನಗರದ ಚಿಕ್ಕೇಗೌಡನ ದೊಡ್ಡಿಯ ಮಹೇಶ್ (30) ಮಳವಳ್ಳಿಯ ಪಂಡಿತಹಳ್ಳಿಯ ಕುಮಾರ್(39) ಬಂಧಿತ ಆರೋಪಿಗಳು. ಬಂಧಿತರಿಂದ 1 ಕೆ.ಜಿ 120 ಗ್ರಾಂ ಗಾಂಜಾ, 3 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬೇರೆಡೆಯಿಂದ ಗಾಂಜಾವನ್ನು ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುವ ದಂಧೆಯಲ್ಲಿ ಹಲವು ದಿನಗಳಿಂದ ತೊಡಗಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ.

ದಂಧೆಯಲ್ಲಿ ತೊಡಗಿದ್ದ ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದ್ದು ಬಂಧಿತರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸತೀಶ್‍ಕುಮಾರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ganja Arrest ಉಪ್ಪಾರಪೇಟೆ ಪೊಲೀಸ್ ಆಯುಕ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ