ಪಾದಾಚಾರಿ ಮೇಲೆ ಹರಿದ ಬಸ್ !

Bus over pedestrian

17-11-2017

ಬೆಂಗಳೂರು: ವೇಗವಾಗಿ ಬಂದ ಬಿಎಂಟಿಸಿ ಬಸ್, ರಸ್ತೆ ದಾಟುತ್ತಿದ್ದ ಪಾದಚಾರಿ ನಾರಾಯಾಣಸ್ವಾಮಿ ಅವರ ಮೇಲೆ ಹರಿದು, ಅವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ನಿನ್ನೆ ರಾತ್ರಿ ನಡೆದಿದೆ.

ಶೇಷಾದ್ರಿಪುರಂನ ಸಂಜಯ್‍ಗಾಂಧಿ ನಗರದ ಪ್ಲಂಬರ್ (ಕೊಳಾಯಿ ಕೆಲಸ) ನಾರಾಯಣಸ್ವಾಮಿ (43) ಅವರು ರಾತ್ರಿ 9ರ ವೇಳೆ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಮೆಜೆಸ್ಟಿಕ್ ಕಡೆಯಿಂದ ಸೀಗೆಹಳ್ಳಿ ಕಡೆಗೆ ಹೋಗುತ್ತಿದ್ದಾಗ 38ರ ಡಿಪೋನ ಬಿಎಂಟಿಸಿ ಬಸ್ ಹರಿದು ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ದಾಖಲಿಸಿರುವ ಮಾಗಡಿ ರಸ್ತೆಸಂಚಾರ ಪೊಲೀಸರು ಬಸ್ ಚಾಲಕ ಸಿದ್ದಪ್ಪನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

BMTC Pedestrian ಪಾದಚಾರಿ ದುರ್ಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ